
ಮೈಸೂರು
ರಸ್ತೆ ಬದಿಯಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದಿಕೆ ವಿತರಣೆ
ಮೈಸೂರು,ಮೇ.31:- ಕಳೆದ ಒಂದು ವಾರಗಳ ಕಾಲದಿಂದ ನಿರಂತರವಾಗಿ ಮಳೆ ಬರುತ್ತಿದ್ದು ರಸ್ತೆ ಬದಿಯಲ್ಲಿ ಮಲಗುವ ನಿರ್ಗತಿಕರುಗಳ ಪಾಡು ಹೀನಾಯ ಸ್ಥಿತಿಯಾಗಿದೆ. ಅವರುಗಳು ರಸ್ತೆ ಬದಿಯಲ್ಲಿ ಮಲಗಿ ಚಳಿಯಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಗಳಲ್ಲಿ ಮಲಗಿರುವ ಸ್ಥಳಗಳ ಬಳಿ ತೆರಳಿ ಸುಮಾರು ನೂರಕ್ಕೂ ಹೆಚ್ಚು ಬೆಡ್ ಶೀಟ್ ಗಳನ್ನು ಅವರಿಗೆ ಹೊದಿಸುವ ಕೆಲಸವನ್ನು ನಗರದ ಅಗ್ರಹಾರ,ಎಂ.ಜಿ.ರಸ್ತೆ, ರಾಮಾನುಜ ರಸ್ತೆ, ಸೆಂಟ್ ಮೇರಿಸ್ ವೃತ್ತ,ಸಿಲ್ಕ್ ಬೋರ್ಡ್ ವೃತ್ತ,ಬಲ್ಲಾಳ್ ವೃತ್ತ, ಸೀತಾ ವಿಲಾಸ್ ವೃತ್ತ, ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ ದ ಭಾಗಗಳಲ್ಲಿ ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸಮಾಜ ಸೇವೆಯನ್ನು ಮಾಡಲಾಯಿತು.
ನಗರ ಅಧ್ಯಕ್ಷ ಜೋಗಿಮಂಜು ಮತ್ತು ಶರತ್ (ಭಂಡಾರಿ) ಲಿಂಗರಾಜು,ಪ್ರೇಮ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)