ಮೈಸೂರು

52,584 ಫಲಾನುಭವಿಗಳ ಖಾತೆಗೆ ಇನ್‍ಪುಟ್ ಸಬ್ಸಿಡಿ ಹಣ : ಡಿ.ರಂದೀಪ್

ಮೈಸೂರು ಜಿಲ್ಲೆಯಲ್ಲಿ 2016-17ನೇ ಸಾಲಿನ ಬರಸ್ಥಿತಿ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಮಳೆ ಅಭಾವದಿಂದ ಕೃಷಿ ಬೆಳೆಗಳು ನಷ್ಟವಾಗಿದ್ದು, ಅರ್ಹ ಫಲಾನುಭವಿಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಇನ್ಪುಟ್ ಸಬ್ಸಿಡಿ ಹಣವನ್ನು ಪರಿಹಾರ ತಂತ್ರಾಂಶದ ಮೂಲಕ ಕ್ರೋಢೀಕರಿಸಿ ಉಳಿತಾಯ ಖಾತೆಗಳು  ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗಿ ಕ್ರಮಬದ್ಧವಾಗಿರುವ 52,584 ಫಲಾನುಭವಿಗಳ ಉಳಿತಾಯ ಖಾತೆಗೆ ನೇರವಾಗಿ ಸರ್ಕಾರದಿಂದ ಇನ್ಪುಟ್ ಸಬ್ಸಿಡಿ ಹಣವನ್ನು ವರ್ಗಾಯಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 25,293 ರೈತರು ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮಾಡದೆ ಇರುವ ಕಾರಣ ಇನ್ಪುಟ್ ಸಬ್ಸಿಡಿ ಹಣ ವರ್ಗಾಯಿಸಿರುವುದಿಲ್ಲ. ಪಿರಿಯಾಪಟ್ಟಣ -2179, ಹುಣಸೂರು– 2548, ಕೃಷ್ಣರಾಜನಗರ-3278, ಮೈಸೂರು-4248, ಹೆಚ್.ಡಿ.ಕೋಟೆ-6279, ನಂಜನಗೂಡು-5862 ಹಾಗೂ ಟಿ.ನರಸೀಪುರ-899 ಫಲಾನುಭವಿಗಳು ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ. ಆಧಾರ್ ಜೋಡಣೆ ಮಾಡದೆ ಇರುವ ಫಲಾನುಭವಿಗಳು ಉಳಿತಾಯ ಖಾತೆಗೆ ಹೊಂದಿರುವ ಬ್ಯಾಂಕ್ನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿ ಮಾಹಿತಿಯನ್ನು ಗ್ರಾಮಲೆಕ್ಕಿಗರು/ರಾಜಸ್ವ ನಿರೀಕ್ಷಕರಿಗೆ ಮಾರ್ಚ್ 26ರೊಳಗಾಗಿ ಮಾಹಿತಿ ನೀಡಬೇಕು. ನಿಗಧಿತ ಅವಧಿಯಲ್ಲಿ ಆಧಾರ್ ಜೋಡಣೆಯಾಗದಿದ್ದಲ್ಲಿ ಇನ್ಪುಟ್ ಸಬ್ಸಿಡಿ ಪರಿಹಾರ ದೊರಕುವುದಿಲ್ಲ ಎಂದು ತಿಳಿಸಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: