ಪ್ರಮುಖ ಸುದ್ದಿ

ಕೊರೋನಾ : ದೇಶದಲ್ಲಿ ಒಂದೇ ದಿನದಲ್ಲಿ 8392 ಹೊಸ ಪ್ರಕರಣ : 1 ಲಕ್ಷ 90 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ದೇಶ(ನವದೆಹಲಿ)ಜೂ.1:-   ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ ಪ್ರತಿದಿನ ವೇಗವಾಗಿ ಹೆಚ್ಚುತ್ತಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಈ ಸಾಂಕ್ರಾಮಿಕ ರೋಗದಿಂದ ಸೋಂಕಿತ ರೋಗಿಗಳ ಸಂಖ್ಯೆ ಈಗ 2 ಲಕ್ಷಕ್ಕೆ ಹತ್ತಿರವಾಗಿದೆ.

ಸಚಿವಾಲಯದ ಪ್ರಕಾರ  ಇದುವರೆಗೆ 1 ಲಕ್ಷ 90 ಸಾವಿರ 535 ಜನರು ಕೊರೋನಾ  ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ 5394 ಜನರು ಸಾವನ್ನಪ್ಪಿದ್ದಾರೆ.   91819 ಜನರು ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 8392 ರಷ್ಟು ಹೆಚ್ಚಾಗಿದ್ದು,230 ಸಾವುಗಳು ಸಂಭವಿಸಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: