ಮೈಸೂರು

ಉಪಚುನಾವಣಾ ಹಿನ್ನೆಲೆ : ಅಕ್ರಮ ಮದ್ಯ ವಶ

ನಂಜನಗೂಡು ವಿಧಾನಸಭಾ ಉಪಚುನಾವಣೆಯನ್ನು ಶಾಂತ ಹಾಗೂ ಮುಕ್ತ ರೀತಿಯಲ್ಲಿ ನಡೆಸುವ ಉದ್ದೇಶದಿಂದ ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿಗಳು ಮಾರ್ಚ್.17ರಿಂದ 21ರವರೆಗೆ ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಪೊಲೀಸರು ಅವರಿಂದ ಒಟ್ಟು 48.360ಲೀ ಮದ್ಯ, 1 ಹೀರೊಹೊಂಡಾ ಫ್ಯಾಷನ್ ಪ್ರೋ ಮತ್ತು 1 ಟಿವಿಎಸ್ ಮೊಪೆಡ್ ನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಸನ್ನದುಗಳಲ್ಲಿ ನಿಯಮ ಉಲ್ಲಂಘನೆಗಾಗಿ ಹುಲ್ಲಹಳ್ಳಿ ಗ್ರಾಮದ ಶಿವ ವೈನ್ಸ್ ಮತ್ತು ಹೆಡತಲೆ ಗ್ರಾಮದಲ್ಲಿರುವ ಎಂ.ಎಸ್.ಐ.ಎಲ್ ಸನ್ನದನ್ನು ಮಾ.22ರಿಂದ ಏ.10ರವರೆಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಅಮಾನತುಪಡಿಸಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: