ಪ್ರಮುಖ ಸುದ್ದಿವಿದೇಶ

ಭಾರತೀಯ ನೌಕಾಪಡೆಯ ಐಎನ್‌ಎಸ್ ಜಲಶ್ವಾ ಮೂಲಕ ಸ್ವದೇಶಕ್ಕೆ ಬರಲಿರುವ ವಿದೇಶದಲ್ಲಿರುವ 700 ಭಾರತೀಯರು

ಕೊಲಂಬೊ,ಜೂ.1- ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್ ಜಲಶ್ವಾ ವಿದೇಶದಲ್ಲಿರುವ 700 ಭಾರತೀಯರೊಂದಿಗೆ ಸ್ವದೇಶಕ್ಕೆ ಬರಲಿದೆ.

ಹಡಗು ಇಂದು ಬೆಳಿಗ್ಗೆ ಕೊಲಂಬೊ ಬಂದರಿಗೆ ತಲುಪಿದ್ದು, ಪ್ರಯಾಣಿಕರೊಂದಿಗೆ ತಮಿಳುನಾಡಿನ ಟುಟಿಕೋರಿನ್‌ಗೆ ತೆರಳಲಿದೆ. ಬಳಿಕ ಮಾಲ್ಡೀವ್ಸ್‌ನಿಂದ ಮತ್ತೆ 700 ಮಂದಿಯನ್ನು ತಮಿಳುನಾಡಿನ ಟ್ಯುಟಿಕೋರಿನ್‌ಗೆ ಬಿಟ್ಟು ಬರಲಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಸ್ ಕರೆತರುವ ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆ ಅಂಗವಾಗಿ ‘ಸಮುದ್ರ ಸೇತು’ ಕಾರ್ಯಾಚರಣೆಯ ಎರಡನೇ ಹಂತದ ಅಡಿಯಲ್ಲಿ ಇವರನ್ನು ಕರೆತರಲಾಗುವುದು.

ಐಎನ್‌ಎಸ್ ಜಲಶ್ವಾ ಕಾರ್ಯನಿರ್ವಾಹಕ ಅಧಿಕಾರಿ ಕಮಾಂಡರ್ ಗೌರವ್ ದುರ್ಗಪಾಲ್ ಮಾತನಾಡಿ, ಕೋವಿಡ್-19 ವಿರುದ್ಧದ ಸುರಕ್ಷತೆಗಾಗಿ ಮಾರ್ಗಸೂಚಿಗಳು ಮತ್ತು ಅದಕ್ಕಾಗಿ ನೌಕಾ ಕೇಂದ್ರ ಕಚೇರಿ ಮತ್ತು ಕಮಾಂಡರ್‌ಗಳು ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ಪ್ರಕಟಿಸುತ್ತಿವೆ ಎಂದು ತಿಳಿಸಿದ್ದಾರೆ.

ಸ್ಥಳಾಂತರಿಸುವ ಉದ್ದೇಶದಿಂದ ಸಂಪೂರ್ಣ ಹಡಗನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯವು ನಾವು ಸ್ಥಳಾಂತರಿಸುವ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸುವ ಪ್ರದೇಶವಾಗಿದೆ. ಕಿತ್ತಳೆ ವಲಯವು ಜನರನ್ನು ಸ್ಥಳಾಂತರಿಸುವ ಬಗ್ಗೆ ಕಾಳಜಿ ವಹಿಸಲು ಮೀಸಲಾದ ತಂಡಕ್ಕಾಗಿರುತ್ತದೆ ಮತ್ತು ಅಧಿಕಾರಿಗಳು ಮತ್ತು ನಾವಿಕರು ಉಳಿದುಕೊಂಡಿರುವುದು ಹಸಿರು ವಲಯ ಎಂದು ಮಾಹಿತಿ ನೀಡಿದ್ದಾರೆ. (ಎಂ.ಎನ್)

Leave a Reply

comments

Related Articles

error: