ಮೈಸೂರು

ಕೊರೋನಾ ಸಂಕಷ್ಟ ಸ್ವಲ್ಪ ಮಟ್ಟಿಗಾದರೂ ತಗ್ಗಿಸಿದ್ದು ಮಾನವೀಯ ಮೌಲ್ಯಗಳು, ಮಾನವೀಯ ಹೃದಯಗಳು : ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಕೊರೋನಾ ಯೋಧರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ

ಮೈಸೂರು,ಜೂ.1:- ಕನ್ನಡ ಸಾಹಿತ್ಯ ಪರಿಷತ್, ನಗರ ಘಟಕ ಮೈಸೂರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಮೈಸೂರು ವತಿಯಿಂದ ಇಂದು ‘ಆರಕ್ಷಕ ಆರೋಗ್ಯ ಸಿಬ್ಬಂದಿಗಳು-ಪೌರಕಾರ್ಮಿಕರ ರಕ್ಷಣೆ ನಮ್ಮ ಹೊಣೆ’ಜಾಗೃತಿ ಅಭಿಯಾನಕ್ಕೆ ಚಾಲನೆ ಮತ್ತು ಕೊರೋನಾ ಯೋಧರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ತೊಣಚಿಕೊಪ್ಪಲು ಅರಳಿಕಟ್ಟೆ ಮರದ ಹತ್ತಿರ ಹಮ್ಮಿಕೊಳ್ಳಲಾಗಿತ್ತು.

ಕೊರೋನಾ ಯೋಧರನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸನ್ಮಾನಿಸಿ ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ಕಳೆದ ಎರಡು ತಿಂಗಳಿನಿಂದ ಸೇವೆ ಮಾಡಿದಂತಹ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದ್ದೇವೆ. ಎರಡೂವರೆ ತಿಂಗಳು ದೇಶನೇ ಸಂಕಷ್ಟಕ್ಕೊಳಗಾದ ಪರಿಸ್ಥಿತಿ ಇತ್ತು, ಪ್ರಧಾನಿಯವರ ತಪ್ಪು ನಿರ್ಧಾರಗಳಿಂದ ಇಡೀ ದೇಶ ಸಂಕಷ್ಟಕ್ಕೊಳಗಾಗತಕ್ಕ ಪರಿಸ್ಥಿತಿ ನಿರ್ಮಾಣವಾಗಿದೆ. ನಾನಾ ರೀತಿಯ ಅವ್ಯವಸ್ಥೆ ನಾನಾ ರೀತಿಯ ತೊಂದರೆಗಳು, ನಾನಾ ರೀತಿಯ ನೋವುಗಳು ಬಹುಶಃ ಇತಿಹಾಸದಲ್ಲೇ ನಾವು ಯಾರೂ ಕೂಡ ಕಾನದ ಪರಿಸ್ಥಿತಿ ಇದೆ. 1920ನೇ ಇಸವಿಯಲ್ಲಿ ಪ್ಲೇಗ್ ಬಂದಾಗ ನಮ್ಮ ಹಿಂದಿನ ತಲೆಮಾರು 2-3 ಇರಲಿಲ್ಲ ಅಂದುಕೊಳ್ಳುತ್ತೇನೆ.  ಇತ್ತೀಚಿನ ಜನರಿಗೆ ಅದು ಗೊತ್ತಿಲ್ಲ. ಆದರೆ ಈಗ ನಡೆದಂತಹ ಅನಾಹುತಗಳು, ಇಡೀ ಪ್ರಪಂಚದಲ್ಲಿ, ಇಡೀ ದೇಶದಲ್ಲಿ ನಡೆದಂತಹ ಅನಾಹುತಗಳು ಯಾರೂ ಹೇಳತೀರದು.  ನಾನಾ ರೀತಿಯ ಸಮಸ್ಯೆಗಳನ್ನು ಇಡೀ ದೇಶ ಅನುಭವಿಸುತ್ತಿದೆ. ಇವೆಲ್ಲದರ ನಡುವೆ ಮಾನವೀಯತೆಯನ್ನು ಮೆರೆದಂತ ಅನೇಕ ಗಣ್ಯರು ಈ ಸಮಾಜದಲ್ಲಿ ಇದ್ದಾರೆ. ಹಾಗಾಗಿ ಈ ವ್ಯವಸ್ಥೆ ಸ್ವಲ್ಪ ಮಟ್ಟಿಗಾದರೂ ಸುಧಾರಿಸಿವೆ. ಅನೇಕ ಮಾನವೀಯತೆಯುಳ್ಳ ಹೃದಯಗಳು ಸ್ಪಂದಿಸದಿದ್ದಲ್ಲಿ ಇವತ್ತು ದೇಶ ಇನ್ನೂ ಸಂಕಷ್ಟಕ್ಕೆ ಒಳಗಾಗುತ್ತಿತ್ತು. ಅವುಗಳನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಿದ್ದು ಮಾನವೀಯ ಮೌಲ್ಯಗಳು.  ಮಾನವೀಯ ಹೃದಯಗಳು.  ಅದರಿಂದ ಸ್ವಲ್ಪಮಟ್ಟಿಗಾದರೂ ಕೂಡ ಜನರ ನೋವು ಕಡಿಮೆಯಾಗತಕ್ಕ ಕೆಲಸದಲ್ಲಿ ಸಹಕಾರಿಯಾಗಿವೆ. ಅದಲ್ಲದಿದ್ದರೆ ಇನ್ನೂ ಸಾಕಷ್ಟು ಅಮಾನವೀಯವಾದ ಪರಿಸ್ಥಿತಿ ನಿರ್ಮಾಣವಾಗ್ತಾ ಇತ್ತು. ಈಗಲೂ ಕೂಡ ಅದೇ ಪರಿಸ್ಥಿತಿ ಆಗಿದೆ. ಕಾರ್ಮಿಕರು ನಡೆದುಹೋಗುವುದು, ರೈಲ್ವೆಯಲ್ಲಿ ಸಾವು, ಕೊರೋನಾಗಿಂತ ಕ್ರೂರ ಸಾವು ಈ ದೇಶದಲ್ಲಿ ನಡೆಯುತ್ತಿದೆ. ಅದು ಲೆಕ್ಕಕ್ಕೆ ಸಿಗ್ತಿಲ್ಲ. ಆ ನೋವುಗಳ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ಕ್ಲಿಷ್ಟಕರ ಸಮಯದಲ್ಲಿ ತಮ್ಮ ಆರೋಗ್ಯ, ಪ್ರಾಣ, ಕುಟುಂಬಸ್ಥರ ಆರೋಗ್ಯ ಲೆಕ್ಕಿಸದೇ ಸೇವೆಯಲ್ಲಿ ತೊಡಗಿದ ವೈದ್ಯರು, ನರ್ಸ್ ಗಳು, ಪೌರಕರ್ಮಿಕರು, ಪೊಲೀಸ್ ರು, ನಗರಪಾಲಿಕೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಮಾಡಿದರು. ಜೀವವನ್ನು ಪಣಕ್ಕಿಟ್ಟು ಸಮಾಜ ಸೇವೆ ಮಾಡ್ತಿದ್ದಾರೆ. ಸಾಂಕೇತೊಕವಾಗಿ ಕೆಲವರಿಗಷ್ಟೇ ಸನ್ಮಾನ ಮಾಡುತ್ತಿದ್ದಾರೆ ಎಂದರು.

ಕೊರೋನಾ ಬಂದ ವೇಳೆ ನಾನು ಸಹಾಯಕ್ಕೆ ನಿಂತಾಗ ಯಾಕೆ ಹೋಗ್ತೀರ? ಬ್ರಿಟನ್ ರಾಜನಿಗೆ ಕೊರೋನಾ ಬಿಟ್ಟಿಲ್ಲ, ನೀವ್ಯಾಕೆ ಬೀದಿಯಲ್ಲಿ ನಿಂತಿದ್ದೀರಾ ಎಂದು ನನ್ನ ಸ್ನೇಹಿತರೇ ನನ್ನನ್ನು ಪ್ರಶ್ನಿಸಿದ್ದರು . ಆದರೂ ಸಹ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಕೊರೋನಾ ವಾರಿಯರ್ಸ್ ಗಳೂ ಸಹ    ಕರ್ತವವೇ ಮುಖ್ಯ ಅಂತ ಅವರ ಸೇವೆ ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ನಗರ ಪಾಲಿಕೆ ದಸ್ಯ ಗೋಪಿ, ಆರೋಗ್ಯಾಧಿಕಾರಿ ಡಾ, ನಾಗರಾಜ್, ಡಾ.ಜಯಂತ್, ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ರಾಜ್ಯ ಹುಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ.ಸಿ.ವೆಂಕಟೇಶ್, ಜಿಲ್ಲಾ ಕಸಾಪ ಖಜಾಂಚಿ ರಾಜಶೇಖರ್ ಕದಂಬ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: