ಮೈಸೂರು

ಸಂಕಷ್ಟದಲ್ಲಿರುವ ರೈತರನ್ನು ಕಡೆಗಣಿಸಿದ ಸರ್ಕಾರ, ಹೊಸ ಸಾಲ ನೀಡಿಕೆ ಕೇವಲ ಕಣ್ಣೊರೆಸುವ ತಂತ್ರ : ಕುರುಬೂರು ಶಾಂತಕುಮಾರ್ ಆರೋಪ

ಮೈಸೂರು,ಜೂ.1:- ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ರೈತರನ್ನು ಸರ್ಕಾರ ಕಡೆಗಣಿಸಿದ್ದು, ಹೊಸ ಸಾಲ ನೀಡಿಕೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ರೈತ ಮುಖಂಡ  ಕುರುಬೂರು ಶಾಂತಕುಮಾರ್ ಆರೋಪಿಸಿದರು.

ಗನ್ ಹೌಸ್ ಬಳಿಯ ಕುವೆಂಪು ಪಾರ್ಕ್ ನಲ್ಲಿ ರೈತರ ಸಭೆ ನಡೆಸಿ ಮಾತನಾಡಿದ ಅವರು ದೇಶದ ಬೆನ್ನೆಲುಬು ರೈತ ಆದರೆ ಸರ್ಕಾರ ರೈತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ರೈತ ಹೋರಾಟಕ್ಕೆ ಕರೆ ಕೊಡುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಸಂಕಷ್ಟದ ನಡುವೆ ಹೊಸ ಕಾಯ್ದೆಗಳ ತಿದ್ದುಪಡಿ ವಿಚಾರಕ್ಕೆ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ವಿದ್ಯುತ್  ಖಾಸಗೀಕರಣವನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಈ ಬಿಲ್ ನಿಂದ ರೈತರಿಗೆ ಅನುಕೂಲವಿಲ್ಲ ಎಂದರು. ಖಾಸಗಿ ಹಣಕಾಸು ಸಂಸ್ಥೆಗಳು ಹಳ್ಳಿಯಲ್ಲಿ ಮಹಿಳೆಯರ ಮೇಲೆ ಹಣ ಕಟ್ಟುವಂತೆ ಒತ್ತಡ ತರುತ್ತಿವೆ. ಇದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಕೈಗೊಳ್ಳಬೇಕಾಗುತ್ತದೆ. ಎ. ಪಿ. ಎಂ. ಸಿ ಕಾಯ್ದೆ ಹಿಂಪಡೆಯದಿದ್ದರೆ  ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಅನ್ಯಾಯವಾಗಲಿದೆ. 28 ಲಕ್ಷ ಪಂಪ್ ಸೆಟ್ ಗಳಿಗೆ ತೊಂದರೆಯಾಗುತ್ತದೆ. ಇದೇ ತಿಂಗಳ 5ನೇ ತಾರೀಖು ಡಿಸಿ ಕಛೇರಿಯ ಬಳಿ ತೆರಳಿ ಹಕ್ಕೊತ್ತಾಯ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: