ಮೈಸೂರು

ಬರಹಗಾರ, ಹೋರಾಟಗಾರಡಾ.ಆನಂದ ತೇಲ್ತುಂಬ್ಡೆ ಅವರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಮೌನ ಪ್ರತಿಭಟನೆ ; ಮನವಿ

ಮೈಸೂರು,ಜೂ.1:-ಡಾ.ಆನಂದ ತೇಲ್ತುಂಬ್ಡೆ ಅವರನ್ನು ಬಿಡುಗಡೆಗೊಳಿಸಬೇಕು, 09ಜಂಟಿ ಕಾರ್ಯದರ್ಶಿಗಳನ್ನು ಐಎಎಸ್ ಪರೀಕ್ಷೆ ಇಲ್ಲದೇ ನೇಮಕ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ  ದಲಿತ ವೆಲ್ ಫೇರ್ ಟ್ರಸ್ಟ್ ಮೌನ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅಧ್ಯಕ್ಷ ಶಾಂತರಾಜು ಮಾತನಾಡಿ ಬರಹಗಾರ, ಹೋರಾಟಗಾರ ಡಾ.ಆನಂದ ತೇಲ್ತುಂಬ್ಡೆ ಅವರನ್ನು ಬಂಧಿಸಿರುವುದು ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ. ಅವರು ಭಾರತದಲ್ಲಿನ ಜಾತಿ ಪದ್ಧತಿಯ ಬಗ್ಗೆ ವಿಸ್ತಾರವಾಗಿ ಬರೆಯುತ್ತಿದ್ದರು. ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಈ ವೈಜ್ಞಾನಿಕ ಯುಗದಲ್ಲೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ನಾಚಿಗೇಡಿನ ವಿಷಯ. ಸ್ವಾತಂತ್ರ್ಯ ಬಂದು 70ವರ್ಷಗಳಾದರೂ ಸರ್ಕಾರ ಜಾತಿ ನಿರ್ಮೂಲನೆ ಮಾಡುವಲ್ಲಿ ಸೋತಿದೆ ಎಂದರು. ಧ್ವನಿ ಇಲ್ಲದವರ ಪರ ಬರೆಯುವುದು, ಕೆಟ್ಟ ಜಾತಿ ವ್ಯವಸ್ಥೆಯ ಕುರೂಪ ದೃಶ್ಯವನ್ನು ಅನಾವರಣಗೊಳಿಸುವುದು ಧಮನಿತರ ಹಕ್ಕುಗಳಿಗಾಗಿ ಹೋರಾಡುವುದನ್ನೇ ಅಪರಾಧಿಕರಿಸುವ ವ್ಯವಸ್ಥೆಯು ಪ್ರಜಾಪ್ರಭುತ್ವದ ತಳಹದಿಯನ್ನು ಬುಡಮೇಲು ಮಾಡುತ್ತದೆ. ಸಮಾನತೆ ಹಾಗೂ ಧಮನಿತರ ಹಕ್ಕುಗಳಿಗೆ ಹೋರಾಡುವವರನ್ನು ರಕ್ಷಿಸುವುದು ನಮ್ಮೆಲ್ಲರ ಮತ್ತು ಸರ್ಕಾರದ ಜವಾಬ್ದಾರಿ. ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ತಕ್ಷಣವೇ ಬಿಡುಗಡೆಗೊಳಿಸುವ ಮೂಲಕ ಓರ್ವ ನಿರಪರಾಧಿಗೆ ಅನ್ವಯವಾಗದಂತೆ ನೋಡಿಕೊಳ್ಳಬೇಕೆಮದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: