ಪ್ರಮುಖ ಸುದ್ದಿ

ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿ ಹೆಚ್ಚಳ

ದೇಶ(ನವದೆಹಲಿ)ಜೂ.1:-   ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿಂದು ಹೆಚ್ಚಳವಾಗಿದೆ. ಸತತ ಮೂರು ತಿಂಗಳ ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿತದ ನಂತರ ಜೂನ್‌ನಲ್ಲಿ ಎಲ್‌ಪಿಜಿ ಬೆಲೆಯನ್ನು ಹೆಚ್ಚಿಸಲಾಗಿದೆ. ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಐಒಸಿ ಇದನ್ನು ಪ್ರಕಟಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಾದ ನಂತರ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಎಲ್‌ಪಿಜಿಯ ಬೆಲೆಯಲ್ಲಿನ ಈ ಹೆಚ್ಚಳ ಇಂದಿನಿಂದ ಜಾರಿಗೆ ಬಂದಿದೆ.

ಎಲ್‌ಪಿಜಿಯ ಅಂತರರಾಷ್ಟ್ರೀಯ ಬೆಲೆಗಳ ಹೆಚ್ಚಳದಿಂದಾಗಿ, ದೆಹಲಿಯ ಎಲ್‌ಪಿಜಿಯ ಚಿಲ್ಲರೆ ಮಾರಾಟದ ಬೆಲೆಯನ್ನು (ಆರ್‌ಎಸ್‌ಪಿ) ಪ್ರತಿ ಸಿಲಿಂಡರ್‌ಗೆ 11.50 ರೂ.ಗೆ ಹೆಚ್ಚಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಿಸಿದೆ. ವಾಸ್ತವವಾಗಿ, ಈ ಹೆಚ್ಚಳವನ್ನು 14.2 ಕೆಜಿ ಸಬ್ಸಿಡಿ ರಹಿತ ಅಡುಗೆ ಅನಿಲಕ್ಕಾಗಿ ಮಾಡಲಾಗಿದೆ. ಇದರ ನಂತರ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ   ಪ್ರತಿ ಸಿಲಿಂಡರ್‌ಗೆ 581.50 ರೂ.ಗಳಿಂದ 593 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 590.50ರೂ, ಕೊಲ್ಕತ್ತಾದಲ್ಲಿ 616ರೂ, ಚೆನ್ನೈನಲ್ಲಿ 606.50ರೂ.ಏರಿಕೆಯಾಗಿದೆ.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: