ಕ್ರೀಡೆಪ್ರಮುಖ ಸುದ್ದಿ

ಕೊರೋನಾ ಹಿನ್ನೆಲೆ : 3 ತಿಂಗಳ ನಂತರ ಜರ್ಮನಿಯಿಂದ ಭಾರತಕ್ಕೆ ಮರಳಿದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್

ದೇಶ(ನವದೆಹಲಿ)ಜೂ.1:- ಕೊರೋನಾ ವೈರಸ್ ಸಾಂಕ್ರಾಮಿಕ  ಹಿನ್ನೆಲೆಯಲ್ಲಿ ವಿಧಿಸಲಾದ ಪ್ರಯಾಣ ನಿರ್ಬಂಧಗಳಿಂದಾಗಿ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಮೂರು ತಿಂಗಳಿಗಿಂತ ಹೆಚ್ಚು ಕಾಲ ಜರ್ಮನಿಯಲ್ಲಿ ಸಿಲುಕಿಕೊಂಡು ಅಂತಿಮವಾಗಿ ತಮ್ಮ ದೇಶಕ್ಕೆ ಮರಳಿದ್ದಾರೆ.

ಫ್ರಾಂಕ್‌ ಫರ್ಟ್‌ನಿಂದ ಬೆಂಗಳೂರಿಗೆ ತಲುಪಿದ ನಂತರ ಆನಂದ್ ಅವರ ಪತ್ನಿ ಅರುಣಾ ಆನಂದ್ ಅವರ ಆಗಮನವನ್ನು ಖಚಿತಪಡಿಸಿದ್ದಾರೆ.  “ಅವರು   ಯಶಸ್ವಿಯಾಗಿ ಭಾರತಕ್ಕೆ ಆಗಮಿಸಿದ್ದು, ಈಗ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ಎಷ್ಟು ಸಮಯದವರೆಗೆ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ. ನಾವು ಸರ್ಕಾರದ ಆದೇಶವನ್ನು ಅನುಸರಿಸುತ್ತೇವೆ. ಅವರು ಚೆನ್ನಾಗಿದ್ದಾರೆ’ ಎಂದಿದ್ದಾರೆ.

ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್ ಫೆಬ್ರವರಿಯಲ್ಲಿ ಬುಂಡೆಸ್ಲಿಗಾ ಚೆಸ್ ಲೀಗ್‌ನಲ್ಲಿ ಭಾಗವಹಿಸಲು ಜರ್ಮನಿಗೆ ತೆರಳಿ ಮಾರ್ಚ್‌ನಲ್ಲಿ ಸ್ವದೇಶಕ್ಕೆ ಮರಳಬೇಕಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಪ್ರಯಾಣದ ನಿರ್ಬಂಧದಿಂದಾಗಿ ಅಲ್ಲಿಯೇ ಸಿಲುಕಿಕೊಂಡರು.

ಆನಂದ್ ರಷ್ಯಾದಲ್ಲಿ ನಡೆದ ಕಾಂಡಿಡಾಟ್ ಪಂದ್ಯಾವಳಿಯಲ್ಲಿ ಆನ್‌ಲೈನ್ ಕಮೆಂಟ್ರಿಯನ್ನೂ ಮಾಡಿದ್ದರು, ಆದರೆ ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಮುಂದೂಡಲಾಯಿತು.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: