ಪ್ರಮುಖ ಸುದ್ದಿ

ಕೊರೋನಾ ವೈರಸ್‌ನಿಂದ ದೆಹಲಿ ಎಎಸ್‌ಐ ಸಾವು :  ಇದು ರಾಜ್ಯದ ಎರಡನೇ ಪ್ರಕರಣ

ದೇಶ(ನವದೆಹಲಿ)ಜೂ.1:- ಕೊರೋನಾ ವೈರಸ್‌ ಸೋಂಕಿನಿಂದ ದೆಹಲಿಯ   54 ವರ್ಷದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಮೃತಪಟ್ಟಿದ್ದಾರೆ.

ಇದರೊಂದಿಗೆ ದೆಹಲಿ ಪೊಲೀಸರಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಸಹಾಯಕ ದೆಹಲಿಯ ಕಮಲಾ ಮಾರುಕಟ್ಟೆ ಪ್ರದೇಶದಲ್ಲಿನ ಅಪರಾಧ ಶಾಖೆಯ ಫಿಂಗರ್ ಪ್ರಿಂಟ್ ಬ್ಯೂರೋ (ಎಫ್‌ಪಿಬಿ) ಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಮಾಜಿ ಸೇನಾ ವ್ಯಕ್ತಿಯಾಗಿದ್ದು, ಅವರು ನವೆಂಬರ್ 1, 2014 ರಂದು ದೆಹಲಿ ಪೊಲೀಸ್ ಹುದ್ದೆಗೆ ನೇಮಕವಾಗಿದ್ದರು.   ಅವರು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿಯಾಗಿದ್ದು, ಪ್ರಸ್ತುತ ಪಶ್ಚಿಮ ದೆಹಲಿಯ ನರೈನಾ ಗ್ರಾಮದಲ್ಲಿ ವಾಸವಾಗಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: