ಮನರಂಜನೆ

ಆಗಸ್ಟ್ 8 ನಟ ರಾಣಾ ದಗ್ಗುಬಾಟಿ-ಮಿಹಿಕಾ ವಿವಾಹ ನಿಗದಿ

ದೇಶ(ನವದೆಹಲಿ)ಜೂ.1:- ಬಾಹುಬಲಿಯ ಖ್ಯಾತಿಯ  ನಟ ರಾಣಾ ದಗ್ಗುಬಾಟಿ ಈ ತಿಂಗಳ ಆರಂಭದಲ್ಲಿ ತನ್ನ ಗೆಳತಿ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ಇಬ್ಬರೂ ಅದರ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ನಿಶ್ಚಿತಾರ್ಥದ ಚಿತ್ರಗಳನ್ನು ನೋಡಿ ಅವರ ಅಭಿಮಾನಿಗಳು ಕೂಡ ಆಶ್ಚರ್ಯಚಕಿತರಾಗಿದ್ದರು. ಈಗ ರಾಣಾ ತಂದೆ ಸುರೇಶ್ ಬಾಬು ಇಬ್ಬರ ಮದುವೆಯ ದಿನಾಂಕವನ್ನು ಖಚಿತಪಡಿಸಿದ್ದಾರೆ. ಆಗಸ್ಟ್ 8 ರಂದು ರಾಣಾ ಮತ್ತು ಮಿಹಿಕಾ ವಿವಾಹವಾಗಲಿದ್ದಾರೆ ಎಂದು ಹೇಳಿದ್ದಾರೆ.

ಕುಟುಂಬದ ಎರಡೂ ಕಡೆಯ ಜನರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಹೇಳಿದ್ದಾರೆ. ಮದುವೆಯ ಸಮಯದಲ್ಲಿ  ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು   ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: