ಪ್ರಮುಖ ಸುದ್ದಿಮನರಂಜನೆ

ಟ್ರೈನ್ ಮೂಲಕವೂ ಕಾರ್ಮಿಕರನ್ನು ಅವರೂರಿಗೆ ಕಳುಹಿಸಿಕೊಟ್ಟ ನಟ ಸೋನುಸೂದ್

ದೇಶ(ನವದೆಹಲಿ)ಜೂ.1:-   ಲಾಕ್ ಡೌನ್ ಸಮಯದಲ್ಲಿ ಮುಂಬಯಿಯಿಂದ ಸಾವಿರಾರು ವಲಸೆ ಕಾರ್ಮಿಕರನ್ನು ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡುವ ಮೂಲಕ  ಉತ್ತಮ ಪ್ರಶಂಸೆಯನ್ನು ಪಡೆಯುತ್ತಿರುವ ಬಾಲಿವುಡ್ ನಟ ಸೋನು ಸೂದ್  ರೈಲಿನ ಮೂಲಕ ಹಲವು ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದಾರೆ.

ಸೋನು ಸೂದ್ ಅವರು 800 ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್),  ಆಜಮ್ ಗಢ ಜೌನ್‌ಪುರ ಮತ್ತು ಹಾಜಿಪುರಕ್ಕೆ ಮುಂಬೈಗೆ ಹೊಂದಿಕೊಂಡಿರುವ ಥಾಣೆಯಿಂದ ರೈಲು ಮೂಲಕ ಕಳುಹಿಸಿದ್ದಾರೆ. ಬಸ್ಸುಗಳಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸುವ ಸಮಯದಲ್ಲಿ  ಸೋನು ಸೂದ್ ಸ್ಥಳದಲ್ಲಿದ್ದರು.  ಅದೇ ರೀತಿ ರೈಲುಗಳಿಂದ ಕಾರ್ಮಿಕರು ಕಳುಹಿಸುವ ಸಮಯದಲ್ಲಿಯೂ ಸೋನು ಸ್ವತಃ ಥಾಣೆ ನಿಲ್ದಾಣದಲ್ಲಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: