ಕರ್ನಾಟಕಪ್ರಮುಖ ಸುದ್ದಿ

ವಿಷ ಸೇವಿಸಿ ನಟಿ ಚಂದನಾ ಆತ್ಮಹತ್ಯೆ

ಬೆಂಗಳೂರು,ಜೂ.1-ಕಿರುತೆರೆ ಹಾಗೂ ಬೆಳ್ಳಿತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ ನಲ್ಲಿ ನಡೆದಿದೆ.

ಚಂದನಾ (29) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಸೆಲ್ಫಿ ವಿಡಿಯೋ ಕೂಡ ಮಾಡಿದ್ದಾರೆ. ವಿಷ ಸೇವಿಸಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಚಂದನಾ ಅವರು ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೆಲ್ಫಿ ವಿಡಿಯೋದಲ್ಲಿ ಚಂದನಾ ವರು ತಮ್ಮ ಪ್ರಿಯಕರ ದಿನೇಶ್ ಎಂಬವರ ಮೇಲೆ ಆರೋಪ ಮಾಡಿದ್ದಾರೆ. ದಿನೇಶ್ ನಾಪತ್ತೆಯಾಗಿದ್ದಾರೆ.

ಚಂದನಾ-ದಿನೇಶ್ ಇಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚಂದನಾ ಬಳಿ ಲಕ್ಷಾಂತರ ದುಡ್ಡು ಪಡೆದಿದ್ದರು. ಮದುವೆ ಪ್ರಸ್ತಾಪ ಬಂದಾಗಲೆಲ್ಲಾ ದಿನೇಶ್ ಮದುವೆಗೆ ಒಲ್ಲೆ ಎನ್ನುತ್ತಿದ್ದರು. ಇದರಿಂದ ನೊಂದ ಚಂದನಾ ದಿನೇಶ್ ಅನ್ನು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಚಂದನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿನೇಶ್, ದಿನೇಶ್ ಅಪ್ಪ, ಅಮ್ಮ, ಮಾವ ಹಾಗೂ ಮತ್ತೊಬ್ಬ ಕುಟುಂಬಸ್ಥರು ಸೇರಿದಂತೆ ಐವರ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿದೆ. ದುಡ್ಡು ಪಡೆದು ವಂಚನೆ, ಮದುವೆಯಾಗುವುದಾಗಿ ನಂಬಿಸಿ ಮೋಸ, ಆತ್ಮಹತ್ಯೆಗೆ ಪ್ರಚೋದನೆ ಎಂಬ ಆರೋಪದ ಮೇಲೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಚಂದನಾ ಅವರ ಮಾವ ಸಂತೋಷ್ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: