ಮೈಸೂರು

ವಾರ್ಡ್ ನಂ -1,3&4 ರ 1400ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ

ಮೈಸೂರು,ಜೂ.1:- ಇಂದು   ವಾರ್ಡ್ ನಂ -1 ರಲ್ಲಿ CITB ಛತ್ರದ ರಸ್ತೆ, ಶಿವಾನಂದ ಶಾಲೆಯಲ್ಲಿ 600 ಕುಟುಂಬಗಳಿಗೆ  &   ವಾರ್ಡ್ ನಂ 3&4 ರ 800 ಬಡ ಕುಟುಂಬಗಳಿಗೆ ಹೆಬ್ಬಾಳ, ಬಸವನಗುಡಿ, ಭೈರವೇಶ್ವರ ಶಾಲೆಯಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ   ಶಾಸಕರಾದ   ಎಲ್. ನಾಗೇಂದ್ರ ಅವರು   ಧವಸ ಧಾನ್ಯಗಳ ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಿದರು.

ಈ  ಪ್ರದೇಶದಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನದ ಕುಟುಂಬಗಳಿಗ ಆಹಾರ ಧಾನ್ಯಗಳ ಕಿಟ್ ಗಳನ್ನು ಸ್ಥಳೀಯ ಪಕ್ಷದ ಮುಖಂಡರ ಸಮ್ಮುಖದಲ್ಲಿ ಹಾಗೂ ಪೊಲೀಸ್ ಅಧಿಕಾರಿಗಳ/ಸಿಬ್ಬಂದಿಗಳ ನೆರವಿನೊಂದಿಗೆ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ  ಮೈಸೂರು ಮಹಾನಗರಪಾಲಿಕೆ ಸದಸ್ಯರಾದ   ರವೀಂದ್ರ , ಚಾಮರಾಜ ವಿಧಾನ ಸಭಾ ಕ್ಷೇತ್ರದ ಭಾ.ಜ.ಪ ಅಧ್ಯಕ್ಷರಾದ  ಸೋಮಶೇಖರ ರಾಜು, ನಗರ ಯುವ ಮೋರ್ಚಾ ಅಧ್ಯಕ್ಷರಾದ   ಕಿರಣ್ ಗೌಡ, ಪ್ರಧಾನ ಕಾರ್ಯದರ್ಶಿ   ಪುನೀತ್ & ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ತರಾದ   ತನುಜ ಮಹೇಶ್,   ಜಯಪ್ಪ,   ದಿನೇಶ್ ಗೌಡ,   ಸುಖದಾರೆ ಕಿರಣ್,  ಸರಸ್ವತಿ,   ರಾಮೇಗೌಡ,      ಮರಿದಾಸೆಗೌಡ,   ಜಿ.ಆರ್.ಎಸ್.ಕುಮಾರ್,   ಕಾರ್ತಿಕ್, ಶ್ರೀಗಂಗಾ,   ದೀಪು,   ಸತೀಶ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: