ಪ್ರಮುಖ ಸುದ್ದಿ

ದೇಶದಲ್ಲಿ ಸುಮಾರು ಎರಡು ಲಕ್ಷ ಕೊರೋನಾ ವೈರಸ್ ಸೋಂಕು ಪ್ರಕರಣ : ಕಳೆದ 24 ಗಂಟೆಗಳಲ್ಲಿ 204 ಮಂದಿ ಸಾವು 

ದೇಶ(ನವದೆಹಲಿ)ಜೂ.2:-  ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಇದುವರೆಗೆ ಸುಮಾರು ಎರಡು ಲಕ್ಷ ಪತ್ತೆಯಾಗಿವೆ.  ಕಳೆದ 24 ಗಂಟೆಗಳಲ್ಲಿ 8171 ಪ್ರಕರಣಗಳು ದಾಖಲಾಗಿವೆ. ಅದೇ ವೇಳೆ  204 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ  ಇದುವರೆಗೆ ಒಂದು ಲಕ್ಷ 98 ಸಾವಿರ 706 ಪ್ರಕರಣಗಳು ವರದಿಯಾಗಿವೆ.

ಅದೇ ವೇಳೆ  5598 ಜನರು ಸಾವನ್ನಪ್ಪಿದ್ದಾರೆ.  95 ಸಾವಿರ 527 ಜನರು ಗುಣಮುಖರಾಗಿ  ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಹೆಚ್ಚು ಕೊರೋನಾ ಸೋಂಕಿತ ರಾಜ್ಯಗಳಾಗಿವೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಒಟ್ಟು ಸೋಂಕಿತ ರೋಗಿಗಳಲ್ಲಿ ಸುಮಾರು 75% ರೋಗಿಗಳು ಮತ್ತು 83% ಸಾವುಗಳು ಕೇವಲ 6 ರಾಜ್ಯಗಳಲ್ಲಿ ಸಂಭವಿಸಿವೆ. ಇಲ್ಲಿಯವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ 6 ರಾಜ್ಯಗಳಲ್ಲಿ 75.33% ಪ್ರಕರಣಗಳು ದಾಖಲಾಗಿವೆ.  ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಗುಜರಾತ್ ಗಳಲ್ಲಿ  ಪ್ರತಿದಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: