ಮೈಸೂರು

ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಹಣ್ಣು ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಿಸಿದ ಶಾಸಕ ಜಿ‌.ಟಿ.ದೇವೇಗೌಡ

ಮೈಸೂರು,ಜೂ.2:- ಮೈಸೂರು ತಾಲೂಕಿನ ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿಂದು ರೈತರ ಅನುಕೂಲಕ್ಕಾಗಿ ಹಾಪ್ ಕಾಮ್ಸ್ ವತಿಯಿಂದ ಹಣ್ಣು ಮಾರಾಟ ಮಳಿಗೆಯ  ಉದ್ಘಾಟನೆಯನ್ನು ಶಾಸಕರಾದ ಜಿ‌.ಟಿ.ದೇವೇಗೌಡ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಬಹಳ ಹಿಂದೆಯೇ ಮಾಡಬೇಕಾಗಿತ್ತು. ತೋಟಗಾರಿಕಾ ಇಲಾಖೆಯ ಹಾಪ್ ಕಾಮ್ಸ್ ವತಿಯಿಂದ ಮಾಡಿದ್ದಾರೆ. ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು. 1983ರಿಂದ 89ರವರೆಗೆ ನಾನು ಉಪಾಧ್ಯಕ್ಷನಾಗಿದ್ದ ವೇಳೆ ಸಂತೆಪೇಟೆ ತರಬೇಕು ಎಂದು ಬಹಳ ಹೋರಾಟ ಮಾಡಿದರೂ ಯಾರೂ ಬರ್ತಾ ಇರಲಿಲ್ಲ. ಆಗ ದನಗಳ ಸಂತೆ ನಡೆಸುವುದು, ಕೋಳಿ, ಕುರಿ,ಆಡುಗಳ ಸಂತೆಯನ್ನು ಮಾಡುತ್ತಿದ್ದೇವು.  ಇದೀಗ ಎಲ್ಲಾ ರೈತರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಉತ್ತಮವಾಗಿ ಸೇವೆಯನ್ನು ಕೊಡುತ್ತಿದ್ದಾರೆ. ಹಣ್ಣು, ತರಕಾರಿಗಳು ತಾಜಾ ಕೊಡಲಾಗುತ್ತಿದೆ. ಒಳ್ಳೆಯದಾಗಲಿ, ರೈತಬಾಂಧವರಿಗೆ, ವರ್ತಕರಿಗೆ ಶುಭ ಹಾರೈಸುವುದಾಗಿ ತಿಳಿಸಿದರು.

ಈ ಸಂದರ್ಭ ಎಪಿಎಂಸಿ ಅಧ್ಯಕ್ಷರಾದ ಪ್ರಭುಸ್ವಾಮಿ, ಉಪಾಧ್ಯಕ್ಷರಾದ ಜವರಪ್ಪ, ಮೈಮುಲ್ ಅಧ್ಯಕ್ಷರು ಎಪಿಎಂಸಿ ಸದಸ್ಯರು ಆದ ಸಿದ್ದೇಗೌಡ, ನಾಗರಾಜು ,ಬೋರಪ್ಪ, ಕೋಟೆಹುಂಡಿ ಮಹದೇವು, ಬಸವರಾಜು ಹಾಗೂ ಹಾಪ್ ಕಾಮ್ಸ್ ಆಡಳಿತಾಧಿಕಾರಿ ಗೋಪಾಲಯ್ಯ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: