ಮೈಸೂರು

ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಕಿಡಿ

ಮೈಸೂರು,ಜೂ.2:- ಪ್ರಧಾನಿ ನರೇಂದ್ರ ಮೋದಿ ಮಾತೆತ್ತಿದರೆ ಆರ್ಟಿಕಲ್ 370, ಪಿಒಕೆ ಬಗ್ಗೆ ಮಾತಾನಾಡುತ್ತಾರೆ. ಆದರೆ ಜನರ ಆರ್ಥಿಕ ಸಂಕಷ್ಟಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಡೀ ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಡಳಿತದ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಕಿಡಿ ಕಾರಿದರು.

ನಗರದ ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ  ಬಿಜೆಪಿಯ 6 ಪ್ರಮಾದಗಳ ಕುರಿತು ವಿವರಣೆ ನೀಡಿದರು. ವಿಕಾಸ್ v/s ವಾಸ್ತವದ ಟೊಳ್ಳು ಭರವಸೆಯ ಮೋದಿ ಅರ್ಥ ಶಾಸ್ತ್ರ ಇದು. ವಾರ್ಷಿಕ ಎರಡು ಕೋಟಿ ಉದ್ಯೊಗ ಸೃಷ್ಟಿ ಮಾಡ್ತೇವೆ ಎಂದು ಹೇಳಿದ್ದರು. ಆದರೆ ಶೇ 28 ರಷ್ಟು ಉದ್ಯೋಗ ಕಳೆದುಕೊಂಡಿದ್ದಾರೆ. 6.66 ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಡಾಲರ್ ಗೆ ಸಮನಾಗಿ ರೂಪಾಯಿ ಮಾಡುತ್ತೇನೆ ಎಂದರು. ಆದರೆ ಇವತ್ತು 76 ರೂ ಇದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದು ಮಿತ್ರೋಂಕಾ ಸಾಥ್  ಬಿಜೆಪಿ ವಿಕಾಸ್ ಆಗಿದೆ. ಬಿಜೆಪಿ ಮಿತ್ರರು ಮಾತ್ರ ವಿಕಾಸವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನ ಸೇವಕ್ ಬದಲಿಗೆ ನಿರಂಕುಶಾಧಿಕಾರಿಯಾಗಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದರು. ಈಗ  ಕೃಷಿ ಆರ್ಥಿಕತೆಯನ್ನೇ ನಾಶಪಡಿಸಿದ್ದಾರೆ. ಅಚ್ಛೇ ದಿನ್ ಅಂತರೆ ಎಲ್ಲಿದೆ ಅಚ್ಛೇ ದಿನ್ ಜನ ಕೆಲಸ ಕಳೆದುಕೊಳ್ಳೋದು ಅಚ್ಛೇ ದಿನ ನಾ ಎಂದು ಪ್ರಶ್ನಿಸಿದರು.

ಬಿಜೆಪಿ ಸಂಪೂರ್ಣವಾಗಿ ಭಾರತವನ್ನು ದುರ್ಬಲ ಗೊಳಿಸಿದೆ. ರಾಜ್ಯ ಸರ್ಕಾರ ಬರಿ ಸುಳ್ಳು ಭರವಸೆ ನೀಡಿದೆ. ಪ್ಯಾಕೇಜ್ ಘೋಷಣೆ ಬರಿ ಸುಳ್ಳು ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್, ಮಂಜುಳ ಮಾನಸ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: