ದೇಶಪ್ರಮುಖ ಸುದ್ದಿ

ಅಸ್ಸಾಂನಲ್ಲಿ ಭೂ ಕುಸಿತ: 20 ಮಂದಿ ಸಾವು

ಗೌಹಾತಿ,ಜೂ.2-ದಕ್ಷಿಣ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಭೂ ಕುಸಿತವುಂಟಾಗಿ 20 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಚಾಚರ್ಜಿಲ್ಲೆಯಲ್ಲಿ 7 ಮಂದಿ, ಹೈಲಕಂಡಿ ಜಿಲ್ಲೆಯಲ್ಲಿ 7 ಮಂದಿ ಹಾಗೂ ಕರೀಂಗಂಜ್ ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಣ್ಣಿನ ಅಡಿ ಇನ್ನೂ ಹಲವರು ಸಿಕ್ಕಿ ಹಾಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದಕ್ಷಿಣ ಅಸ್ಸಾಂನ ಹಲವು ಪ್ರದೇಶಗಳಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿಯೇ ಭೂ ಕುಸಿತ ಸಂಭವಿಸಿದೆ. ಮೇ 26 ಮತ್ತು 27ರಂದು ಸಹ ಹಲವು ಪ್ರದೇಶದಲ್ಲಿ ಭೂ ಕುಸಿತವಾಗಿತ್ತು. 9 ಸಾವಿರ ಗ್ರಾಮಸ್ಥರನ್ನು 35 ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: