ದೇಶಪ್ರಮುಖ ಸುದ್ದಿ

ತೆಲಂಗಾಣ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ನಾಲ್ವರ ಸಾವು

ರಾಮಗುಂಡಂ,ಜೂ.2-ಉತ್ತರ ತೆಲಂಗಾಣದ ರಾಮಗುಂಡಂ ಬಳಿ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ನಾಲ್ವರ ಶವವನ್ನು ಗಣಿಯಿಂದ ಹೊರಕ್ಕೆ ತೆಗೆಯಲಾಗಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಗೋದಾವರಖನಿ ಸಿಂಗರೇನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗಣಿಯಲ್ಲಿ ಸ್ಫೋಟಗೊಳಿಸುವುದಕ್ಕಾಗಿಯೇ ಅವರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದರು. ಕಾಸ್ಟ್-1 ಗಣಿ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಫೋಟವುಂಟಾಗಲು ಕಾರಣ ಏನು ಎಂಬುದು ಇಲ್ಲಿಯರೆಗೆ ಸ್ಪಷ್ಟವಾಗಿಲ್ಲ. (ಎಂ.ಎನ್)

Leave a Reply

comments

Related Articles

error: