ದೇಶ

ಆನ್‌ಲೈನ್‌ ತರಗತಿ ಮಿಸ್ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ತಿರುವನಂತಪುರಂ,ಜೂ.2-ಆನ್ಲೈನ್ತರಗತಿಗೆ ಹಾಜರಾಗದಿದ್ದಕ್ಕೆ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮಲಪ್ಪುರಂ ಜಿಲ್ಲೆಯ ವಲಂಚೇರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದೇವಿಕಾ ಬಾಲಕೃಷ್ಣನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ದೇವಿಕಾ ಆನ್ಲೈನ್ತರಗತಿಯಲ್ಲಿ ಪಾಲ್ಗೊಳ್ಳಲು ತಮ್ಮ ಮನೆಯಲ್ಲಿ ಟಿವಿ ಇಲ್ಲ ಹಾಗೂ ಸ್ಮಾರ್ಟ್ಪೋನ್ಕೂಡ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಮನೆಯಲ್ಲಿ ಆಕೆ ಬರೆದಿದ್ದ ಡೆತ್ನೋಟ್ ಸಿಕ್ಕಿದ್ದು, ನಾನು ಹೋಗುತ್ತೇನೆ ಎಂದು ಭಾವನಾತ್ಮಕ ಪತ್ರ ಬರೆದಿದ್ದಾರಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಸ್ವಾಭಾವಿಕ ಸಾವು ಎಂದು ಎಫ್ಐಆರ್ ಹಾಕಿದ್ದಾರೆ.

ದೇವಿಕಾ ಅವರ ತಂದೆ ಬಾಲಕೃಷ್ಣನ್ ದಿನಗೂಲಿ ಕಾರ್ಮಿಕ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕೆಲಸ ಮಾಡಲು ಸಹ ಸಾಧ್ಯವಾಗಿರಲಿಲ್ಲ. ಮಗಳಿಗೆ ಆನ್ಲೈನ್ ತರಗತಿಗೆ ವ್ಯವಸ್ಥೆ ಮಾಡುವಷ್ಟು ಶಕ್ತರಾಗಿರಲಿಲ್ಲ. ದೇವಿಕಾ ಸಾವಿನ ಪ್ರಕರಣವನ್ನು ತನಿಖೆ ನಡೆಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್ ಆದೇಶಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: