ಮನರಂಜನೆ

ಮುದ್ದು ತಮ್ಮನಿಗೆ ಆಯ್ರಾಳ ಲಾಲಿ: ವಿಡಿಯೋ ವೈರಲ್

ಬೆಂಗಳೂರು,ಜೂ.2-ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಆಯ್ರಾಳ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಯ್ರಾ ಮುದ್ದು ತಮ್ಮನಿಗೆ ಲಾಲಿ ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಯ್ರಾ ತೊದಲು ಭಾಷೆಯಲ್ಲಿ ಸಹೋದರನೊಂದಿಗೆ ಮಾತನಾಡುತ್ತಿದ್ದಾಳೆ. ಎಲ್ಲ ಕ್ಷಣಗಳನ್ನು ರಾಧಿಕಾ ಸೆರೆಹಿಡಿದಿದ್ದಾರೆ.

ಜೊತೆಗೆ ಮಗಳಿಗೆ 18 ತಿಂಗಳು ತುಂಬಿದ ಸಂದರ್ಭದಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮ ಮಗಳಿಗೆ 18 ತಿಂಗಳು ತುಂಬಿದೆ. ಈಕೆ ನಿಮ್ಮನ್ನೆಲ್ಲ ನಗಿಸುತ್ತಾಳೆ ಎಂಬ ಭರವಸೆ ನಮ್ಮದು. ಆಕೆ ಅಪ್ಪನನ್ನೇ ಅನುಕರಣೆ ಮಾಡುತ್ತಿದ್ದಾಳೆ ಎಂದು ವಿಡಿಯೋ ಜೊತೆಗೆ ಕ್ಯಾಪ್ಷನ್ನೀಡಿದ್ದಾರೆ.

ಅಭಿಮಾನಿಗಳು ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಮುದ್ದಾದ ಮಕ್ಕಳಿಗೆ ಹಾರೈಸುತ್ತಿದ್ದಾರೆ. ಅಕ್ಕ ಎಂದರೆ ಮತ್ತೊಬ್ಬ ತಾಯಿ ಇದ್ದಂತೆ ಎಂಬುದಕ್ಕೆ ವಿಡಿಯೋ ಸಾಕ್ಷಿಎಂದು ಕೆಲವರು ಕಾಮೆಂಟ್ಮಾಡಿದ್ದಾರೆ.

ರಾಧಿಕಾ ಪಂಡಿತ್ ಸದ್ಯ ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಮದುವೆ ಬಳಿಕ ನಟಿಸಿದ ಕೊನೇ ಚಿತ್ರಆದಿಲಕ್ಷ್ಮೀ ಪುರಾಣ‘. (ಎಂ.ಎನ್)

 

Leave a Reply

comments

Related Articles

error: