ಲೈಫ್ & ಸ್ಟೈಲ್

ತಾಯಿಯಾಗುವ ಕನಸು ನನಸಾಗಲಿದೆ..!

ಆಧುನಿಕತೆ ಹೆಚ್ಚಿದಂತೆ ಮಹಿಳೆಯ ಕೆಲಸಗಳೇನೂ ಕಡಿಮೆಯಾಗಿಲ್ಲ. ಆಕೆ ಒತ್ತಡದ ನಡುವೆಯೇ ಬದುಕುತ್ತಿದ್ದಾಳೆ. ಇದರಿಂದ ಆಕೆಯಲ್ಲಿ ಸ್ರವಿಸುವ ಹಾರ್ಮೋನ್ ಗಳು ಅಸಮತೋಲನಗೊಂಡು ಅಂಡಾಣು ಉತ್ಪತ್ತಿ ಕಡಿಮೆಯಾಗತೊಡಗಿವೆ.  ಅಂಡಾಣು ಸಂಖ್ಯೆ ಕಡಿಮೆ ಇದ್ದಲ್ಲಿ  ಆಕೆಯ ತಾಯಿಯಾಗುವ ಕನಸು ಸಾಕಾರಗೊಳ್ಳಲಾರದು. ಆರೋಗ್ಯಕರ ಅಂಡಾಣುಗಳ ಉತ್ಪತ್ತಿಗೆ ಹೇರಳ ವಿಟಮಿನ್ ಇರುವ ಆಹಾರಗಳನ್ನು ಮಹಿಳೆ ತಪ್ಪದೇ ಸೇವಿಸಿದಲ್ಲಿ ಖಂಡಿತ ಆಕೆಯ ಕನಸು ಈಡೇರಲಿದೆ.

ಬಾದಾಮಿ : ಇದರಲ್ಲಿ ವಿಟಾಮಿನ್ ಇ ಹೇರಳವಾಗಿರಲಿದೆ. ಇದು ಫಲವಂತಿಕೆಯನ್ನು ಹೆಚ್ಚಿಸುತ್ತದೆ. ಇದು ಅಂಡಾಣುಗಳನ್ನು ರಕ್ಷಿಸುತ್ತದೆ.

ಮೊಟ್ಟೆ : ಇದರಲ್ಲಿರುವ ವಿಟಾಮಿನ್ ಡಿ, ಬಿ12 ಮತ್ತು ಪ್ರೋಟೀನ್ ಇದು ಫಲವಂತಿಕೆಯನ್ನು ಹೆಚ್ಚಿಸುತ್ತವೆ. ಮತ್ತು ಗರ್ಭಧರಿಸಿದಾಗಲೂ ಸಹ ಯಾವುದೇ ಸಮಸ್ಯೆ ಬಾರದಂತೆ ತಡೆಯುತ್ತದೆ.

ನಟ್ಸ್ : ಇದರಲ್ಲಿ ಓಮೇಗಾ 3, ಫೈಟಿ ಆ್ಯಸಿಡ್ಸ್, ತವರ, ವಿಟಾಮಿನ್ ಇ ಮತ್ತು ಹೇರಳ ಪ್ರೋಟೀನ್ ಗಳಿರುತ್ತವೆ. ಇದರಲ್ಲಿ ಅಂಡಾಣು ಆರೋಗ್ಯಕರವಾಗಿರುತ್ತದೆ ಮತ್ತು ಅಂಡಾಣುಗಳ ಸಂಖ್ಯೆ ಹೆಚ್ಚಲಿದೆ.

ಓಟ್ಸ್ : ಇದರಲ್ಲಿ ಫಾಯ್ಬರ್ಸ್ ಗಳಿದ್ದು, ಶರೀರದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ಗರ್ಭಧಾರಣೆ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ.

ಕಿತ್ತಳೆ : ಇದರಲ್ಲಿರುವ ವಿಟಾಮಿನ್ ಸಿ ಮಹಿಳೆಯರಲ್ಲಿರುವ ಹಾರ್ಮೋನ್ಸ್ ನ್ನು ಸಮತೋಲನದಲ್ಲಿಡುತ್ತದೆ. ಗರ್ಭಧರಿಸಲು ಸಹಾಯ ಮಾಡುತ್ತದೆ.

ಬಟಾಣಿ :  ಇದರಲ್ಲಿರುವ ತವರ ಅಂಶವು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನ್ ಗಳನ್ನು ಸಮತೋಲನದಲ್ಲಿಟ್ಟು ಗರ್ಭಧಾರಣೆಗೆ ಸಹಕರಿಸುತ್ತದೆ.

ಪಾಲಕ್ : ಇದರಲ್ಲಿ ಕಬ್ಬಿಣದಂಶವಿದೆ. ಅಂಡಾಣು ಕೊರತೆಯನ್ನು ನೀಗಿಸಿ ಗರ್ಭಧರಿಸಲು ಸಹಕರಿಸುತ್ತದೆ.

ಈ ಎಲ್ಲವನ್ನು ಪಾಲಿಸಿದಲ್ಲಿ  ಅಂಡಾಣು ಕೊರತೆ ನಿವಾರಣೆಯಾಗಿ, ತಾಯಿಯಾಗುವ ಕನಸನ್ನು ಹೊತ್ತಿರುವ ಮಹಿಳೆಯರು ಬಲುಬೇಗನೆ ಗರ್ಭಧರಿಸುವ ಸಾಧ್ಯತೆಗಳಿವೆ.  (ಎಸ್.ಎಚ್)

 

Leave a Reply

comments

Related Articles

error: