ಪ್ರಮುಖ ಸುದ್ದಿ

  ಆಧಾರ್ ಕಾರ್ಡ್  ತೋರಿಸದೆ  ಹೇರ್ ಕಟ್ಟಿಂಗ್ ಗೆ ಅವಕಾಶ ನೀಡಬಾರದು  :  ತಮಿಳುನಾಡು ಸರ್ಕಾರದ ಆದೇಶ

ದೇಶ(ನವದೆಹಲಿ)ಜೂ.2:- ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ, ಆದರೆ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಅನ್ಲಾಕ್ -1 ರಲ್ಲಿ ವಿನಾಯಿತಿ ನೀಡುವ ವ್ಯಾಪ್ತಿಯನ್ನು ಹೆಚ್ಚಿಸಿದೆ. ಹೊಸ ನಿಯಮಗಳ ದೃಷ್ಟಿಯಿಂದ ಜೂನ್ 01 ರಿಂದ ತಮಿಳುನಾಡಿನಲ್ಲಿ ಸೆಲೊನ್ಸ್ ಮತ್ತು ಬ್ಯೂಟಿ ಪಾರ್ಲರ್ ಗಳನ್ನು ತೆರೆಯಲಾಗಿದೆ, ಆದರೆ ಈಗ ಕ್ಷೌರ ಮಾಡಿಸಲು ರಾಜ್ಯದಲ್ಲಿ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿರುತ್ತದೆ. ಇದಕ್ಕಾಗಿ ತಮಿಳುನಾಡು ಸರ್ಕಾರ ಎಸ್ಒಪಿ ಹೊರಡಿಸಿದೆ.

ತಮಿಳುನಾಡು ಸರ್ಕಾರ ಹೊರಡಿಸಿದ ಎಸ್ಒಪಿ ಪ್ರಕಾರ, ನೀವು ಈಗ ರಾಜ್ಯದಲ್ಲಿ ಕ್ಷೌರ ಮಾಡಿಸಲು ಬಯಸಿದರೆ,  ನೀವು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿರುತ್ತದೆ. ಇದರೊಂದಿಗೆ ಸೆಲೂನ್ ಮಾಲೀಕರು ಪ್ರತಿ ಗ್ರಾಹಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸುತ್ತಾರೆ.  ಹಾಗೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ತಮಿಳುನಾಡು ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಕೇವಲ 50 ಪ್ರತಿಶತದಷ್ಟು ಸಿಬ್ಬಂದಿಗಳೊಂದಿಗೆ ಸೆಲೂನ್ ಅಂಗಡಿಗಳು ತೆರೆಯಲ್ಪಡುತ್ತವೆ. ಇದರೊಂದಿಗೆ, ಸೆಲೂನ್ನಲ್ಲಿ ಕೆಲಸ ಮಾಡುವ ಜನರು ಮತ್ತು ಗ್ರಾಹಕರು ಮಾಸ್ಕ್  ಧರಿಸುವುದು ಸಹ ಕಡ್ಡಾಯವಾಗಿರುತ್ತದೆ. ಅದೇ ವೇಳೆ  ಗ್ರಾಹಕರು ಆರೋಗ್ಯ ಸೇತು ಅಪ್ಲಿಕೇಶನ್ನ ವಿವರಗಳನ್ನು ಅಂಗಡಿಯವರಿಗೆ ತೋರಿಸಬೇಕು. ಅಂಗಡಿಯವರು ಸ್ಯಾನಿಟೈಜರ್ಗಳನ್ನು ಇರಿಸಿಕೊಳ್ಳಬೇಕು.

ಸರ್ಕಾರದ ಹೊಸ ಎಸ್ಒಪಿ ಪ್ರಕಾರ, ಸೆಲೂನ್ ಮಾಲೀಕರು ಗ್ರಾಹಕರಿಗೆ ಬಿಸಾಡಬಹುದಾದ ಏಪ್ರನ್ಗಳು ಮತ್ತು ಫೂಟ್ ಕವರ್ಗಳನ್ನು ಒದಗಿಸಬೇಕು. ಗ್ರಾಹಕರ ಬಿಲ್ ಒಂದು ಸಾವಿರ ರೂಪಾಯಿ ಇದ್ದರೆ ಅವರು ಬಿಸಾಡಬಹುದಾದ ಏಪ್ರನ್ ಮತ್ತು  ಫೂಟ್ ಕವರ್ ಗಾಗಿ  150 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: