ಮೈಸೂರು

ಕೊರೋನಾ ಲಾಕ್ ಡೌನ್ ಹಿನ್ನೆಲೆ : ಲಾಕ್ ಆಗಿರುವ ವ್ಯಾಯಾಮ ಶಾಲೆಯನ್ನು ಪುನರಾರಂಭಿಸಲು ಅವಕಾಶ ನೀಡುವಂತೆ ಜಿಮ್ ಮಾಲೀಕರಿಂದ ಮನವಿ

ಮೈಸೂರು,ಜೂ.2:- ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ  ಲಾಕ್ ಆಗಿರುವ ವ್ಯಾಯಾಮ ಶಾಲೆಯನ್ನು ಪುನರಾರಂಭಿಸಲು ಅವಕಾಶ ನೀಡುವಂತೆ ಜಿಮ್ ಮಾಲೀಕರು ಹಾಗೂ ತರಬೇತುದಾರರು ಒಕ್ಕೊರಲಿನಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಜಿಮ್ ಮಾಲೀಕರು ಹಾಗೂ ತರಬೇತುದಾರರು ಆರ್ಥಿಕ ಸಂಕಷ್ಟದಲ್ಲಿದ್ದು  ಜಿಮ್‌ ಓಪನ್ ಮಾಡುವಂತೆ ಮೈಸೂರು ಜಿಲ್ಲಾ ಹವ್ಯಾಸಿ ದೇಹದಾರ್ಢ್ಯ ಸಂಸ್ಥೆಯು  ಸರ್ಕಾರಕ್ಕೆ ಮನವಿ ಮಾಡುತ್ತಿದೆ. ನಾವು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ನಿರೀಕ್ಷೆ ಮಾಡುತ್ತಿಲ್ಲ. ಎಲ್ಲದಕ್ಕೂ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ. ಆದ್ರೆ ನಮಗೆ ಇನ್ನೂ ಅವಕಾಶ ನೀಡಿಲ್ಲ. ಲಾಕ್ ಡೌನ್ ನಿಂದ ಸಾಕಷ್ಟು ತೊಂದರೆ ಆಗಿದೆ. ಮನೆ ಹಾಗೂ ಜಿಮ್ ಬಾಡಿಗೆ ಕಟ್ಟಲು ಸಾದ್ಯವಾಗದೆ ಕಷ್ಟದಲ್ಲಿದ್ದೇವೆ. ಬ್ಯಾಂಕ್ ಗಳಿಂದ ಸಾಲ ಪಡೆದಿದ್ದೇವೆ. ಹೀಗೆ ಮುಂದುವರೆದರೆ ನಮ್ಮ ಕುಟುಂಬದ ಪರಿಸ್ಥಿತಿ ಏನು ?ಈ ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು. ಜಿಮ್ ತೆರೆಯಲು ಅನುಮತಿ ನೀಡಬೇಕು ಎಂದು ಅಧ್ಯಕ್ಷ ವಿಶ್ವನಾಥ್,ಮಾಲೀಕರಾದ ಮಹೇಶ್,ಮಂಜುನಾಥ್, ಅವಿನಾಶ್, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: