ಪ್ರಮುಖ ಸುದ್ದಿ

ಸಾಮೂಹಿಕ ವಿವಾಹ ಸ್ಥಗಿತ : ಅಗತ್ಯ ಸಾಮಾಗ್ರಿ ಮನೆಗಳಿಗೆ ತಲುಪಿಸಲು ನಿರ್ಧಾರ

ರಾಜ್ಯ( ಮಡಿಕೇರಿ) ಜೂ.2 :- ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಏಳು ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ಕೊರೋನಾ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಘÀಟನೆಯ ವತಿಯಿಂದ ಸರಳ ವಿವಾಹಕ್ಕೆ ಅನುಕೂಲವಾಗುವಂತೆ ಚಿನ್ನಾಭರಣ ಸೇರಿದಂತೆ ಅಗತ್ಯ ನೆರವನ್ನು ಅವರವರ ಮನೆಗಳಿಗೆ ತಲುಪಿಸಲಾಗುವುದೆಂದು ಸಂಘಟನೆಯ ಉಪಾಧ್ಯಕ್ಷ ಎ.ಎಂ.ಹಂಸ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ವತಿಯಿಂದ ಕಳೆದ ವರ್ಷ 6 ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹವನ್ನು ಮೂರ್ನಾಡಿನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ 7 ಮಂದಿಯ ವಿವಾಹವನ್ನು ನಡೆಸಲು ನಿರ್ಧರಿಸಲಾಗಿತ್ತಾದರೂ ಕೊರೊನಾ ಲಾಕ್ ಡೌನ್ ಮುಂದುವರೆದಿರುವ ಹಿನ್ನೆಲೆ ಕಾರ್ಯಕ್ರಮವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಪ್ರತಿ ಜೋಡಿಗೆ ಚಿನ್ನಾಭರಣ, ವಸ್ತ್ರಗಳು, ವಾಚ್‍ನ್ನು ನೀಡಲು ದಾನಿಗಳು ನೆರವನ್ನು ನಿಡಿದ್ದಾರೆ. ಇದೀಗ ಈ ವಿವಾಹಗಳು ಪ್ರತ್ಯೇಕವಾಗಿ ಅವರವರ ಮನೆಗಳಲ್ಲೆ ಸರಳವಾಗಿ ನಡೆಯಲಿರುವುದರಿಂದ ಸಂಘಟನೆಯು ವತೊಯಿಂದ ಈ ಎಲ್ಲಾ ನೆರವನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತಿದೆಯೆಂದು ಸ್ಪಷ್ಟಪಡಿಸಿದರು.
ಸಂಘಟನೆಯು ಕಳೆದ ಇಪ್ಪತ್ತು ವರ್ಷಗಳ ಹಿಂದೆ ದುಬಾಯಿಯಲ್ಲಿ ಆರಂಭವಾಗಿದ್ದರೂ ಕೊಡಗಿನಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜ ಬಾಂಧವರನ್ನು ಗುರುತಿಸಿ ಸಹಾಯಹಸ್ತವನ್ನು ನೀಡುತ್ತಲೆ ಬಂದಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲು ಹಲವು ಕುಟುಂಬಗಳಿಗೆ ಆರ್ಥಿಕವಾಗಿ ಹಾಗೂ ಆಹಾರ ದಾನ್ಯಗಳನ್ನು ನೀಡುವ ಮೂಲಕ ನೆರವು ನೀಡಲಾಗಿದೆ. ಕೊಡಗು ಜಿಲ್ಲೆÉಯಲ್ಲಿ ಅಗತ್ಯವಾಗಿ ಬೇಕಾಗಿರುವ ಆಂಬ್ಯುಲೆನ್ಸ್ ಸೇವೆಯನ್ನು 5 ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರು ಅಪಘಾತದಲ್ಲಿ ಅಥವಾ ರೋಗಕ್ಕೆ ತುತ್ತಾದಲ್ಲಿ ಅವರಿಗೆ ಧನ ಸಹಾಯ ನೀಡುವುದು, ಮರಣ ಸಂಭವಿಸಿದರೆ ಕಾನೂನಿನಡಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಮೃತ ದೇಹವನ್ನು ಉಚಿತವಾಗಿ ಕೊಡಗಿನ ಅವರ ಮನೆಗೆ ಕಳುಹಿಸಿಕೊಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಸಂಘ ನೆಯ ನಿರ್ದೇಶಕ ಹಾಗೂ ಜಿಪಂ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಅರ್ಪಿಸಿದ ಆಂಬ್ಯುಲೆನ್ಸ್ ಜಿಲ್ಲೆಯ ಹಲವು ಕಡೆ ಸೇವೆಗಳನ್ನು ನೀಡುತ್ತಿದೆ. ಬಡವರಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಕೇವಲ ಡೀಸೆಲ್ ವೆಚ್ಚವನ್ನು ಪಡೆದು ಸೇವೆಯನ್ನು ಒದಗಿಸಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಮೊ.9448505011 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಅಬ್ದುಲ್ಲ ಬಲಮುರಿ, ಸಲಾಂ ಕೊಂಡಂಗೇರಿ, ಹಾರಿಸ್ ಕೊಟ್ಟಮುಡಿ ಹಾಗೂ ಮುಜಾಮಿಲ್ ಚಾಮಿಯಾಲ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: