ಮೈಸೂರು

ಕರ್ನಾಟಕ ಸೇನಾ ಪಡೆಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ: ಮೈಸೂರು ಪಾಕ್ ವಿತರಣೆ

ಮೈಸೂರು,ಜೂ.3-ಕರ್ನಾಟಕ ಸೇನಾ ಪಡೆ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯನ್ನು ಆಚರಿಸಿ ಸಿಹಿ ಹಂಚಲಾಯಿತು.

ಇಂದು ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಾಲ್ವಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ ಮೈಸೂರು ಪಾಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪಪೊಲೀಸ್ ಆಯುಕ್ತರಾದ ಡಾ.ಎ.ಎನ್.ಪ್ರಕಾಶ್ ಗೌಡ, ಮೈಸೂರು ರಾಜಮನೆತನಕ್ಕೆ ನಾವೆಲ್ಲರೂ ಚಿರುಋಣಿಯಾಗಿರಬೇಕು. ರಾಜಮನೆತನದವರು ಕನ್ನಡ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಆ ದಿಕ್ಕಿನಲ್ಲಿ ನೋಡಿದರೆ ಮೈಸೂರು ಇಷ್ಟು ಸುಂದರವಾಗಿ ಸ್ವಚ್ಛನಗರ ಎಂದೆನ್ನಿಸಿಕೊಳ್ಳುವುದಕ್ಕೆ ರಾಜಮನೆತನದ ಕಾಣಿಕೆಯೇ ಬಹುಮುಖ್ಯ ಕಾರಣ. ಕನ್ನಂಬಾಡಿ ಕಟ್ಟೆ, ವಿದ್ಯಾಭ್ಯಾಸ ಯೋಜನೆಯಡಿ ಶಾಲಾ ಕಾಲೇಜುಗಳನ್ನು ತೆರೆದದ್ದು, ನೀರಾವರಿ ಯೋಜನೆ, ಮೀಸಲಾತಿ ಯೋಜನೆ, ಬ್ಯಾಂಕ್, ಕೈಗಾರಿಕಾಗಳನ್ನು ತೆರೆದರು. ಸಾಕಷ್ಟು ಅಭಿವೃದ್ಧಿಶೀಲ ಚಿಂತನೆಗಳ ಮೂಲಕ ಮೈಸೂರು, ಸುತ್ತಮುತ್ತಲಿನ ಜಿಲ್ಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಶ್ರಮಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದಾತ ಚಿಂತನಾಶೀಲತೆ ನಮ್ಮೆಲ್ಲರೂ ಮೂಡಲಿ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಸ್ ಜೆಕೆ ಎಕರ್ಸ್ ಅಧ್ಯಕ್ಷ ಎಂ.ಎನ್.ದೊರೆಸ್ವಾಮಿ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಕೆ.ಎಸ್, ಎಂ.ಎನ್)

 

Leave a Reply

comments

Related Articles

error: