ಮೈಸೂರು

ಕಸದ ತೊಟ್ಟಿಯಾದ ಬ್ಯಾರಿಕೇಡ್

ಮೈಸೂರು,ಜೂ.3-ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಹಲವೆಡೆ ಕಸದಬುಟ್ಟಿಗಳನ್ನು ಇಡಲಾಗಿದ್ದರೂ ಅದನ್ನು ಉಪಯೋಗಿಸುವ ಗೋಜಿಗೆ ಹೋಗದ ಮಂದಿ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಲೇ ಇರುತ್ತಾರೆ.

ತ್ಯಾಜ್ಯವನ್ನು ಕಸದ ಬುಟ್ಟಿಗೆ ಹಾಕದೆ ಬ್ಯಾರಿಕೇಡ್ ಅನ್ನೇ ಕಸದ ಬುಟ್ಟಿಯನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ನಗರದ ಹೃದಯಭಾಗದಲ್ಲಿರುವ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಪೊಲೀಸರು ಹಾಕಿರುವ ಬ್ಯಾರಿಕೇಡ್ ಗೆ ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ನ ತ್ಯಾಜ್ಯವನ್ನು ಹಾಕಿದ್ದಾರೆ.

ಅರಮನೆ ಕಡೆಯಿಂದ ಹಾದು ಹೋಗುವ ಕೆಲ ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ಅನ್ನು ಬ್ಯಾರಿಕೇಡ್ ಗೆ ಹಾಕಿ ಹೋಗುತ್ತಿದ್ದಾರೆ. ಇದರಿಂದ ಬ್ಯಾರಿಕೇಡ್ ಕಸದ ಬುಟ್ಟಿಯಾಗಿ ಮಾರ್ಪಾಡಾಗಿದೆ.

ಕಳೆದ ತಿಂಗಳಷ್ಟೇ ಮೈಸೂರಿಗೆ ತ್ಯಾಜ್ಯ ಮುಕ್ತ ನಗರ ಎಂಬ ಬಿರುದು ಸಿಕ್ಕಿತ್ತು. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮೈಸೂರನ್ನು ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿಯಾಗಿ ನಾಲ್ಕನೇ ಸ್ಥಾನದಲ್ಲಿ ಘೋಷಿಸಿತ್ತು. ಆದರೆ ಇದನ್ನು ನೋಡಿದರೆ ಅದನ್ನು ಅಣಕಿಸುವಂತಿದೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: