ಮೈಸೂರು

ವೈದ್ಯರ ವೇಷದಲ್ಲಿ ಬಂದ ವ್ಯಕ್ತಿ ಮೊಬೈಲ್ ಪಡೆದು ಪರಾರಿ

ಮೈಸೂರು,ಜೂ.3:- ವೈದ್ಯರ ವೇಷದಲ್ಲಿ ಬಂದ ವ್ಯಕ್ತಿಯೋರ್ವ ಮಹಿಳೆಯೋರ್ವರ ಕೈಲಿದ್ದ ಮೊಬೈಲ್ ಪಡೆದು ಪರಾರಿಯಾದ ಘಟನೆ ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ನಡೆದಿದೆ.

ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ವೈದ್ಯರ ವೇಷದಲ್ಲಿ ಬಂದಿದ್ದ ವ್ಯಕ್ತಿ ಯರಗನಹಳ್ಳಿ ನಿವಾಸಿ ಗೀತಾ ಅವರಿಂದ ಮೊಬೈಲ್ ಪಡೆದು ಪರಾರಿಯಾಗಿದ್ದಾನೆ. ಇವರು ತಮ್ಮ ಸಂಬಂಧಿಯೊಂದಿಗೆ ಪೋನಿನಲ್ಲಿ ಸವಿನಾಶ್ ಎಂಬವರ ಕುರಿತು ಮಾತಾಡುತ್ತಿದ್ದರು. ವೈದ್ಯನ ಸೋಗಿನಲ್ಲಿ ಸ್ಥಳಕ್ಕೆ ಬಂದ ವ್ಯಕ್ತಿ  ನಿಮ್ಮ ಸಂಬಂಧಿ ಅವಿನಾಶ್ ಅವರೊಂದಿಗೆ ಮಾತನಾಡಬೇಕು ಎಂದು ಹೇಳಿ ಮೊಬೈಲ್ ಮೂಲಕ ಕರೆ ಮಾಡಿಸಿದ್ದು ಅವರೊಂದಿಗೆ ಮಾತನಾಡುವಂತೆ ನಟಿಸುತ್ತ ಮೊಬೈಲ್ ಜೊತೆ ಹೊರಹೋದವನು ಮತ್ತೆ ಬಂದಿಲ್ಲ ಎನ್ನಲಾಗಿದ್ದು, ಎಲ್ಲಿ ಹುಡುಕಿದರೂ ಕಂಡು ಬರಲಿಲ್ಲ ಎನ್ನಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: