ಮೈಸೂರು

ಜೂ.5 : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಮೈಸೂರು,ಜೂ.3:- ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ಶ್ರೀ ವಾಸುದೇವ ಮಹಾರಾಜರ 82ನೇ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರು ಪತ್ರಕರ್ತರ ಭವನದಲ್ಲಿ ಜೂ.5ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಎನ್.ಅನಂತ್ ದೀಕ್ಷಿತ್ ತಿಳಿಸಿದ್ದಾರೆ.

ಜೂ.5ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಹಿರಿಯ ಉದ್ಯಮಿ ಎಂ.ಎನ್.ದೊರೆಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಸಂಸ್ಥೆಯ ಅಧ್ಯಕ್ಷೆ ಎಂ.ವಿ.ಅನಿತ ಉಪಸ್ಥಿತರಿದ್ದರು, ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಡಾ.ಎನ್ ಶಶಿಶೇಖರ್ ದೀಕ್ಷಿತ್, ಚಿತ್ರಕಲೆ ಡಾ.ಮೀರಾ ಕುಮಾರ್, ಸಾಹಿತ್ಯ ಡಾ.ಕೆ.ಲೀಲಾಪ್ರಕಾಸ್, ಆಧ್ಯಾತ್ಮಿಕ ಡಾ.ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಯೋಗ ಡಾ.ಪಿ.ಆರ್.ವಿಶ್ವನಾಥ್ ಶೆಟ್ಟಿ, ಸಮಾಜಸೇವೆ ಕೆ.ಆರ್.ಯೋಗನರಸಿಂಹನ್, ಸಂಘಟನೆ ವಿಕ್ರಂ ಅಯ್ಯಂಗಾರ್ ಇವರಿಗೆ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: