ಪ್ರಮುಖ ಸುದ್ದಿಮನರಂಜನೆ

ದಿ.ವಾಜಿದ್ ಖಾನ್ ಅವರ ತಾಯಿರಜಿನಾ ಖಾನ್ಗೆ ಕೊರೋನಾ ಪಾಸಿಟಿವ್

ದೇಶ(ನವದೆಹಲಿ)ಜೂ.3:-  ಖ್ಯಾತ ಸಂಗೀತ ಸಂಯೋಜಕ ವಾಜಿದ್ ಖಾನ್ ನಿಧನರಾದ ಒಂದು ದಿನದ ನಂತರ  ಅವರ ತಾಯಿ ರಜಿನಾ ಖಾನ್ ಅವರಲ್ಲಿ ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ ಎನ್ನಲಾಗಿದೆ.

ರಜಿನಾ ಖಾನ್ ಅವರನ್ನು ಚೆಂಬೂರಿನ ಸುರಾನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು  ತಿಳಿಸಿವೆ. ಇದೇ ಆಸ್ಪತ್ರೆಯಲ್ಲಿಯೇ ವಾಜಿದ್ ಖಾನ್ ಕೂಡ ಚಿಕಿತ್ಸೆ ಪಡೆದಿದ್ದರು. ಕುಟುಂಬದೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವರು ಈ ಕುರಿತು ಮಾಹಿತಿ ನೀಡಿದ್ದು “ಅವರ ತಾಯಿಗೆ ಕೊರೋನಾ ಸೋಂಕು ತಗುಲಿರುವುದು ಕಂಡುಬಂದಿದೆ. ನೆಗೆಟುವ್ ವರದಿ ಬರುವವರೆಗೂ ಅವರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ” ಎಂದು ಹೇಳಿದ್ದಾರೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: