ಕ್ರೀಡೆ

ಇಂದಿನಿಂದ ಬಂಗಾಳದಲ್ಲಿ ಕ್ರಿಕೆಟ್ ಟ್ರೈನಿಂಗ್  ಪ್ರಾರಂಭ  : ಖುದ್ದು ತರಬೇತಿ ನೀಡಿದ  ಕ್ರೀಡಾ ರಾಜ್ಯ ಸಚಿವರು  

ದೇಶ(ನವದೆಹಲಿ)ಜೂ.3:- ಇಂದಿನಿಂದ ಬಂಗಾಳದ ಕೆಲವು ಕ್ರಿಕೆಟ್ ಅಕಾಡೆಮಿಗಳಲ್ಲಿ ಆಟಗಾರರ ತರಬೇತಿ ಪ್ರಾರಂಭವಾಗಿದೆ.

ಹೌರಾದಲ್ಲಿ  ಭಾರತದ ಮಾಜಿ ಕ್ರಿಕೆಟಿಗ ಮತ್ತು ಕ್ರೀಡಾ (ರಾಜ್ಯ) ಸಚಿವ ಲಕ್ಷ್ಮಿ ರತ್ನ ಶುಕ್ಲಾ ಅವರೇ ಮೈದಾನದಲ್ಲಿ ಆಟಗಾರರಿಗೆ ತರಬೇತಿ ನೀಡುತ್ತಿರುವುದು ಕಂಡು ಬಂತು. ಆಟಗಾರರು ಮಾಸ್ಕ್  ಧರಿಸಿ ಅಭ್ಯಾಸ ಮಾಡಿದರು. ಈ ಸಮಯದಲ್ಲಿ, ಎಲ್ಲಾ ಆಟಗಾರರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಅಕಾಡೆಮಿಗೆ ಬಂದ ಕೂಡಲೇ ಎಲ್ಲ ಆಟಗಾರರ ದೇಹದ ಉಷ್ಣತೆಯನ್ನು ತಪಾಸಿಸಲಾಯಿತು. ಮೊದಲ ದಿನ  ಆಟಗಾರರು ಹೆಚ್ಚಾಗಿ ದೈಹಿಕ ತರಬೇತಿ ಪಡೆಯುವುದನ್ನು ಕಾಣಬಹುದಾಗಿದೆ.

ಲಕ್ಷ್ಮಿ ರತ್ನ ಶುಕ್ಲಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ “ನಿಧಾನವಾಗಿ ಆಟಗಾರರು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಬೇಕು ಮತ್ತು ಈ ನಿಯಮವನ್ನು ಪಾಲಿಸುವಂತೆ ಕ್ರಿಕೆಟಿಗರಿಗೆ ತಿಳಿಸಿಲಾಗಿದೆ. ಮಾಸ್ಕ್  ಧರಿಸುವಾಗ ಉಸಿರಾಟದಲ್ಲಿ ತೊಂದರೆಗಳಿದ್ದರೆ ತಕ್ಷಣ ತಿಳಿಸುವಂತೆಯೂ ಸೂಚನೆ ನೀಡಲಾಗಿದೆ. ಐಸಿಸಿ ಆಟಗಾರರು ಅನುಸರಿಸಲು ಏನೇನು ನಿಯಮಗಳನ್ನು ಹೇಳಿದೆಯೀ ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದಿರುವ ಅವರು  ಭವಿಷ್ಯದಲ್ಲಿ ಆಟಗಾರರು ಎದುರಿಸಬೇಕಾದ ಸವಾಲು ಮೊದಲಿಗಿಂತ ಭಿನ್ನವಾಗಿದೆ ಎಂದು   ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟಿಗರು ಅದಕ್ಕೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಈಗ ಸವಾಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: