ಪ್ರಮುಖ ಸುದ್ದಿ

ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಅಪ್ಪಳಿಸಿದ ನಿಸರ್ಗ ಚಂಡಮಾರುತ :  ಮುಂದಿನ 3 ಗಂಟೆಗಳ ಕಾಲ ಗಾಳಿಯೊಂದಿಗೆ ಭಾರೀ ಮಳೆ

ದೇಶ(ನವದೆಹಲಿ)ಜೂ.3:- ನಿಸರ್ಗ್ ಚಂಡಮಾರುತವು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಿದೆ.  ಚಂಡಮಾರುತವು ಮುಂಬೈನ ಅಲಿಬಾಗ್ ಕರಾವಳಿಯಲ್ಲಿ ಅಪ್ಪಳಿಸಿದೆ.

ಹವಾಮಾನ ಇಲಾಖೆಯ ಪ್ರಕಾರ ಚಂಡಮಾರುತವು ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ಅಪ್ಪಳಿಸಿದೆ. ಮುಂಬಯಿಯ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಮುಂಬೈ ಮತ್ತು ಗುಜರಾತ್‌ನ ಹೆಚ್ಚಿನ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಚಂಡಮಾರುತವು ಅಲಿಬಾಗ್ ನಲ್ಲಿ ಅಪ್ಪಳಿಸಿದ್ದು, ಅಲಿಭಾಗ್ ನಲ್ಲಿ ಭಾರೀ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಪ್ರಿಸೆಸ್ ಕಂಪ್ಲೀಟ್ ಆಗಲು  ಸುಮಾರು 3 ಗಂಟೆ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಬಿರು ಗಾಳಿ ಮತ್ತು ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ಮರಗಳು ಬಿದ್ದಿವೆ.  ಬಿರುಗಾಳಿ ಮತ್ತು ಮಳೆಯ ಮಧ್ಯೆ ಮನೆಗಳಲ್ಲಿ ಉಳಿಯಲು ಜನರಿಗೆ ಸೂಚನೆ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಇದು ಕರಾವಳಿ ಪ್ರದೇಶಗಳಿಗೆ ಹೋಗದಂತೆ ತಡೆಯಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: