ಮೈಸೂರು

ವಿದ್ಯುತ್ ಸಂಪರ್ಕ ಖಾಯಂ ಮಾಡುವಂತೆ  ಮತ್ತು ಡ್ರೈನೆಜ್ ಮತ್ತು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜೂ.3:- ಲಾಲ್ ಬಹದ್ದೂರ್ ಶಾಸ್ತ್ರೀ ನಗರ ಮತ್ತು ಶಾಂತವೇರಿ ಗೋಪಾಲಗೌಡ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಖಾಯಂ ಮಾಡುವಂತೆ  ಮತ್ತು ಡ್ರೈನೆಜ್ ಮತ್ತು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬಡಾವಣೆಯಲ್ಲಿ ಸುಮಾರು 100ಮನೆಗಳು ನಿರ್ಮಾಣವಾಗಿದ್ದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸದರಿ ಬಡಾವಣೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲ. ಈಗಾಗಲೇ ಪ್ರಾಧಿಕಾರದ ನಿಯಮದಂತೆ ಗುತ್ತಿಗೆ ಅವಧಿ ಸಹ ಮುಗಿದಿದ್ದು ಈ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳು ಹೆಚ್ಚಿನವರು ನಿವೃತ್ತಿ ಹೊಂದಿರುತ್ತಾರೆ. ಈ ಬಡಾವಣೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಪ್ರಾಧಿಕಾರದವರು ಮಾಡಿಲ್ಲ. ವಿದ್ಯುತ್ , ನೀರಿನ ಸಮಸ್ಯೆ, ರಸ್ತೆ ದುರಸ್ತಿ ಕಾರ್ಯ ಯಾವುದೂ ನಡೆದಿಲ್ಲ ಎಮದು ಆರೋಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: