ಮೈಸೂರು

ಬಿ.ಪಿ.ಸಿ.ಎಲ್ ಡೀಲರ್ ಗಳು ಅನುಭವಿಸುತ್ತಿರುವ ಸಮಸ್ಯೆ ನಿವಾರಿಸಲು ಒತ್ತಾಯಿಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬಿ.ಪಿ.ಸಿ.ಎಲ್ ಡೀಲರ್ ಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಕುರಿತು ಬಿ.ಪಿ.ಸಿ.ಎಲ್ ಮೈಸೂರಿನ ಪ್ರಾಂತೀಯ ಕಚೇರಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿ  ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ರಾಮನಗರ ಮತ್ತು ಹಾಸನ ಜಿಲ್ಲೆಯ ಬಿ.ಪಿ.ಸಿ.ಎಲ್ ಡೀಲರ್ ಗಳು  ಗುರುವಾರ ಇಂಧನ ಖರೀದಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಂಜನಗೂಡಿನ ಸಪ್ತಗಿರಿ ಸರ್ವೀಸ್ ಸ್ಟೇಷನ್ ಹಾಗೂ ಮೈಸೂರಿನ ಲಕ್ಷ್ಮಿ ಪಾಟೀಲ್ ಸರ್ವೀಸ್ ಸ್ಟೇಷನ್  ನಲ್ಲಿ ಪೈಪ್ ಲೈನ್ ದೋಷದಿಂದಾಗಿ ಡೀಸೆಲ್ ಸೋರಿಕೆಯಾಗಿದೆ ನಷ್ಟವನ್ನು ಹಿಂಭರ್ತಿ ಮಾಡಬೇಕು. ಶಿವಶಕ್ತಿ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಟ್ಯಾಂಕಿಗೆ ನೀರು ಸೇರುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆಯನ್ನು ನಿವಾರಿಸಬೇಕು. ಬ್ಯಾಂಕ್ ರಜಾ ದಿನಗಳಲ್ಲಿ ಇಂಧನ ಸರಬರಾಜಿಗೆ ಬಡ್ಡಿ ಹಾಕಲಾಗುತ್ತಿದೆ. ಇದನ್ನು ಹಿಂಭರ್ತಿ ಮಾಡುವುದಲ್ಲದೇ ಬಡ್ಡಿಯನ್ನು ತೆಗೆಯಬೇಕು.  ಗಿಫ್ಟ್ ವೋಚರ್ಸ್ ಮೊತ್ತವನ್ನು ಡೀಲರ್ ಗಳಿಗೆ ಹಿಂಭರ್ತಿ ಮಾಡಬೇಕು  ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ಪ್ರಾಂತೀಯ ಭಾರತ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಎಸ್.ಗೋವಿಂದರಾಜನ್ ಸಂಘದ ಪದಾಧಿಕಾರಿಗಳಾದ ಎಸ್. ಆರ್. ಪಾಟೀಲ್, ಶ್ರೀಧರ್, ವೆಂಕಟೇಶ್, ರಂಜಿತ್ ಹೆಗಡೆ, ಭಾಗ್ಯ, ನಾರಾಯಣಸ್ವಾಮಿ  ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: