ಮೈಸೂರು

ರಾಜರ್ಷಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಯದಲ್ಲಿನ ಆಡಳಿತ ಸುವರ್ಣಯುಗ : ರಾಜವಂಶಸ್ಥ ಯದುವೀರ್ ಬಣ್ಣನೆ

ಮೈಸೂರು,ಜೂ.4:-  ಮೈಸೂರು ಅರಮನೆ ಎದುರು ರಾಜರ್ಷಿ  ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಧಂತಿ ಹಿನ್ನೆಲೆಯಲ್ಲಿಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪುಷ್ಪನಮನ ಸಲ್ಲಿಸುವ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಯಂತಿ ಆಚರಿಸಿದರು.

ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು  ಅರಮನೆಯಲ್ಲಿ ಚಿಕ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅವರ ಸಮಯದಲ್ಲಿನ ಆಡಳಿತ ಮೈಸೂರಿನಲ್ಲಿ  ಸುವರ್ಣಯುಗ ಎಂದು ಸ್ಮರಿಸುತ್ತೇವೆ ಎಂದು ಬಣ್ಣಿಸಿದರಲ್ಲದೇ. ಅದನ್ನು ಪುನಃ ನಾವು ಕಾಣಬೇಕೆಂಬ ಇಚ್ಛೆಯಿದೆ ಎಂದರು.

ಮೈಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕೆಂಬ  ಒತ್ತಾಯ ಕೇಳಿ ಬರುತ್ತಿದೆ ಅದಕ್ಕೆ ನಿಮ್ಮ ಅಭಿಪ್ರಾಯ ಎಂದು ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿ ಹೆಸರಿಟ್ಟರೆ ಅದನ್ನು ಜನ ಮರೆತು ಹೋಗ್ತಾರೆ. ಅವರು ನೀಡಿದ ಒಳ್ಳೆಯ ಆಡಳಿತದ ದಿನ ಗಳನ್ನು ಸ್ಮರಣೆ ಮಾಡಿದರೆ ಒಳ್ಳೆಯದು. ಅದು ಆಡಳಿತಕ್ಕೆ ನೀಡಿದ ಗೌರವಾಗಲಿದೆ. ಹೆಸರು ನೀಡುವುದಕ್ಕಿಂತ  ಅವರ ಕಾಲದ ಆಡಳಿತ ಹೇಗಿತ್ತು. ಅದನ್ನು ಅನುಸರಿಸಬೇಕು ಎಂದರು.

ಕೆ.ಆರ್.ಎಸ್ ನಲ್ಲಿ ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಿ ಪೂಜ್ಯ ರಾಜಮಾತೆಯವರು ಏನು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಅದೇ ನನ್ನ ಮಾತು ಕೂಡ ಎಂದರು.

ಕೊರೋನಾ ಕುರಿತು ಪ್ರತಿಕ್ರಿಯಿಸಿ ಸಾಂಕ್ರಾಮಿಕ ಪರಿಸ್ಥಿತಿ ಜಗತ್ತಿನಲ್ಲಿ ಉಂಟಾಗಿದೆ. ಇಂತಹ ರೋಗ ಬರ್ತಾ ಇರತ್ತೆ. ಇತಿಹಾಸದಲ್ಲಿ ನೋಡೋಕೆ ಹೋದರೆ ಇಂತಹ ನೋವುಗಳು ಒಂದು ಶತಮಾನ ಆಗಿದೆ. ಅಷ್ಟು ಬೇಗ ಹೋಗಲ್ಲ. ನಾವು  ಈ ಕೊರೋನಾ ವೇಳೆ ಜಯಗಳಿಸಲು ಲಾಕ್ ಡೌನ್ ನಲ್ಲಿ ಏನೇನು ಹೊಸ ಪದ್ಧತಿಗಳನ್ನು ಆರಂಭಿಸಿದ್ದೇವೆ.  ಮುಂದೆಯೂ ಅದೇ ರೀತಿ, ಹಿಂದೆ ಅನುಸರಿಸಿದ್ದನ್ನೇ ಅನುಸರಿಸುವುದು ಸೂಕ್ತ ಹಾಗಿದ್ದರೆ ಜಯಗಳಿಸಬಹುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: