ಮೈಸೂರು

ರೈಲ್ವೆ ಬೋರ್ಡ್ ನೀಡಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ

ಗ್ರೇಡ್ ಪೆ 4200 ಮತ್ತು ಅದಕ್ಕಿಂತ ಹೆಚ್ಚಿರುವ ಸುರಕ್ಷಿತ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ರೈಲ್ವೆ ಸಂಘಟನೆಗಳ ಪದಾಧಿಕಾರಿಗಳ ಹುದ್ದೆಯಿಂದ ವಜಾ ಮಾಡುವಂತೆ ಜನವರಿ 30ರಂದು ರೈಲ್ವೆ ಬೋರ್ಡ್ ನೀಡಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈಲ್ವೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮೈಸೂರಿನ ರೈಲ್ವೆ ನಿಲ್ದಾಣದ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಗ್ರೂಪ್ ಸಿ ಹುದ್ದೆಯಲ್ಲಿರುವ ನೌಕರರ ಹಿರಿತನವನ್ನು ಪರಿಗಣಿಸಿ, ಗ್ರೂಪ್ ಬಿ ಗೆಜೆಟೆಡ್ ಹುದ್ದೆಗೆ ಭಡ್ತಿ ನೀಡಬೇಕು.  ಗ್ರೇಡ್ ಪೆ 4600ನ್ನು 4800ಎಂದು ಪರಿಗಣಿಸಬೇಕು. ಲೋಕೋ ಇನ್ಸಪೆಕ್ಟರ್ ಗಳ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: