Uncategorized

ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದ ವಿಂಡೀಸ್ ನ ಮೂವರು ಆಟಗಾರರು

ಲಂಡನ್,ಜೂ.4-ಕೋವಿಡ್ 19 ಭೀತಿಯ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ನ ಮೂವರು ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು, ವೆಸ್ಟ್‌ ಇಂಡೀಸ್‌ ವಿರುದ್ಧ ಖಾಲಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಯೋಜಿಸಿದೆ. ಟೂರ್ನಿಯು ಜುಲೈ 8 ರಿಂದ ಆರಂಭವಾಗಲಿದೆ. ಆದರೆ ವಿಂಡೀಸ್ ನ ಡರೇನ್‌ ಬ್ರಾವೊ, ಶಿಮ್ರೋನ್‌ ಹೆಟ್ಮೆಯರ್‌ ಮತ್ತು ಕೀಮೊ ಪೌಲ್‌ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡವು ಕ್ವಾರಂಟೈನ್‌ ಮತ್ತು ತರಬೇತಿ ಸಲುವಾಗಿ ಇದೇ ತಿಂಗಳು 9ರಂದು ಓಲ್ಡ್‌ ಟ್ರಾಫರ್ಡ್‌ಗೆ ಬಂದಿಳಿಯಲಿದೆ. ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮಂಡಳಿಯು 14 ಆಟಗಾರರ ತಂಡ ಮತ್ತು 11 ಮೀಸಲು ಆಟಗಾರ ಪಟ್ಟಿಯನ್ನು ಪ್ರವಾಸಕ್ಕೆ ಅಂತಿಮಗೊಳಿಸಿದೆ. ಆದರೆ, ಈ ತಂಡದ ಕೆಲವು ಆಟಗಾರರು ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆದಿದ್ದಾರೆ.

ತಂಡದ ಆಯ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ವಿಂಡೀಸ್‌ ಮಂಡಳಿ, ‘ಇಂಗ್ಲೆಂಡ್ ಸರ್ಕಾರದ ಅಂತಿಮ ಅನುಮೋದನೆ ದೊರೆತಿರುವ ಮೂರು ಪಂದ್ಯಗಳ ವಿಸ್ಡನ್‌ ಟ್ರೋಫಿ ಟೂರ್ನಿಯಲ್ಲಿ ವಿಂಡೀಸ್‌ ಆಡಲಿದೆ. ಜುಲೈ 8ರಿಂದ ಪಂದ್ಯಗಳು ಆರಂಭವಾಗಲಿವೆ. ಅದರಂತೆ ಪ್ರವಾಸ ಕೈಗೊಳ್ಳಲಿರುವ ಆಟಗಾರರಿಗೆ ಕೋವಿಡ್-19 ತಪಾಸಣೆ ನಡೆಸಿ, ಇದೇ 8 ರಂದು ಖಾಸಗೀ ವಿಮಾನಗಳಲ್ಲಿ ತೆರಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಮುಂದುವರಿದು, ವಿಂಡೀಸ್ ನ ಡರೇನ್‌ ಬ್ರಾವೊ, ಶಿಮ್ರೋನ್‌ ಹೆಟ್ಮೆಯರ್‌ ಮತ್ತು ಕೀಮೊ ಪೌಲ್‌ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸಲಾಗುವುದು. ಈ ಹಿಂದೆಯೇ ಹೇಳಿರುವಂತೆ ಮುಂದಿನ ಟೂರ್ನಿಗಳಿಗೆ ತಂಡದ ಆಯ್ಕೆ ಮಾಡುವಾಗ ಈ ಮೂವರನ್ನು ಕಡೆಗಣಿಸುವುದಿಲ್ಲ ಎಂದಿದೆ. (ಎಂ.ಎನ್)

Leave a Reply

comments

Related Articles

error: