ದೇಶಪ್ರಮುಖ ಸುದ್ದಿ

ರಸಗೊಬ್ಬರ, ಕೀಟನಾಶಕಗಳ ಮಾರಾಟಕ್ಕೆ ವಿದ್ಯಾರ್ಹತೆ ಅಗತ್ಯ: ಕೃಷ್ಣಬೈರೇಗೌಡ

ಬೆಂಗಳೂರು: ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಗಿ ಪಡೆಯಲು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಕನಿಷ್ಟ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಹತೆ ಪೂರೈಸುವುದನ್ನ ಕಡ್ಡಯಾಗೊಳಿಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಅಂಗೀಕೃತ ವಿಶ್ವವಿದ್ಯಾನಿಲಯ, ಸಂಸ್ಥೆಗಳಿಂದ ಬಿಎಸ್ಸಿ(ಕೃಷಿ) ಪದವಿ ಅಥವಾ ಬಿ.ಎಸ್ಸಿ(ರಸಾಯನ ಶಾಸ್ತ್ರ) ಅಥವಾ ಡಿಪ್ಲೊಮೊ(ಕೃಷಿ ವಿಜ್ಞಾನ) National Institute of Agricultural Extension Management(manage) and NIPHM ಮತ್ತು ಇತರೆ ಸರ್ಕಾರಿ ಅಂಗೀಕೃತ ಸಂಸ್ಥೆಗಳು ಕೃಷಿ ಪರಿಕರಗಳ ಮೇಲೆ ನೀಡುವ ಕನಿಷ್ಠ 6 ತಿಂಗಳಿನ ಸರ್ಟಿಫಿಕೇಟ್ ಕೋರ್ಸ್ಗಳನ್ನು ಅಧ್ಯಯನ ಮಾಡಿ ತೇರ್ಗಡೆ ಹೊಂದಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ರಸಗೊಬ್ಬರ ನಿಯಂಯ್ರಣ ಆದೇಶ ಮತ್ತು ಕೀಟನಾಶಕ ನಿಯಮಗಳನ್ವಯ ಕೇಂದ್ರ ಸರ್ಕರದ ಪತ್ರ ಸಂ:3-20/2015  ದಿನಾಂಕ 18-10-2016ರನ್ವಯ ಈ ವಿದ್ಯಾರ್ಹತೆಯು ಹೊಸದಾಗಿ ಪರವಾನಗಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಚಿಲ್ಲರೆ ಮಾರಾಟಗಾರರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಈಗಾಗಲೇ ಪರವಾನಗಿಯನ್ನು ಹೊಂದಿರುವ ಪರವಾನಗಿದಾರರಿಗೆ ಪರವಾನಗಿಯ ನವೀಕರಣದ ಸಮಯದಲ್ಲಿ ಮೇಲ್ಕಂಡ ವಿದ್ಯಾರ್ಹತೆಯ ವಿನಾಯಿತಿಯನ್ನು ನೀಡಲಾಗಿರುತ್ತದೆ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವ್ವಾಮಿಯವರು ಕೃಷಿ ಇಲಾಖೆಯಿಂದ ರಸಗೊಬ್ಬರ ಮತ್ತು ಕೀಟ ನಾಶಕ ಔಷಧಿಗಳ ಅಂಗಡಿಗಳನ್ನು ತೆರೆಯಲು ಅಳವಡಿಸಲಾಗಿರುವ ನಿಯಮಗಳೇನು ಹಾಗೂ ಸದರಿ ಅಂಗಡಿಗಳನ್ನು ತೆರೆಯಲು ಮಾಲೀಕರಿಗೆ ನಿಗಧಿಪಡಿಸಲಾದ ವಿದ್ಯಾರ್ಹತೆಗಳೇನು? ಎಂದು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವರು ಲಿಖಿತ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ ದಿನಾಂಕ 1-2-2017, ಕೀಟನಾಶಕ(ಎರಡನೇ ತಿದ್ದುಪಡಿ) ನಿಯಮ, 2017 ರನ್ವಯ ಪರವಾನಿಗೆ ಪಡೆಯಲು ವಿದ್ಯಾರ್ಹತೆಯನ್ನು ಹೊಂದಿರುವವರನ್ನು ನೇಮಕ ಮಾಡಿಕೊಳ್ಳಬೇಕು. ಕೃಷಿ ವಿಜ್ಞಾನಗಳಲ್ಲಿ ಪದವಿ ಅಥವಾ ಜೀವರಸಾಯನ ಶಾಸ್ತ್ರ, ಜೈವಿಕ ತಂತ್ರಜ್ಞಾನ ಅಥವಾ ಜೀವ ವಿಜ್ಞಾನ ಅಥವಾ ವಿಜ್ಞಾನದ ಪದವಿಯೊಂದಿಗೆ ರಸಾಯನಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಒಂದು ವರ್ಷದ ಕೃಷಿ ಅಥವಾ ತೋಟಗಾರಿಕೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮೊ ಪಡೆದು ಸಸ್ಯ ಸಂರಕ್ಷಣೆ ಮತ್ತು ಪೀಡೆ ನಾಶಕಗಳ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿರಬೇಕು ಎಂದು ಕೃಷಿ ಸಚಿವರು ವಿವರ ನೀಡಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: