ಮೈಸೂರು

ಟಿಬೇಟಿಯನ್ ರ ಪಾಳು ಬಿದ್ದ ಜಮೀನಿನ ಪ್ರದೇಶದಲ್ಲಿ ಹುಲಿಯ ಮೃತದೇಹ ಪತ್ತೆ : ಅಧಿಕಾರಿಗಳ ಭೇಟಿ

ಮೈಸೂರು,ಜೂ.5:-ಹುಣಸೂರು ತಾಲೂಕಿನ  ವೀರನಹೊಸಳ್ಳಿ ವನ್ಯಜೀವಿ ವಲಯದ ತುಪ್ಪದ ಕೊಳ ಗಸ್ತಿನ ಮಾವಿನ ಮರ ಹೆಬ್ಬಳ್ಳದ ಆನೆಕಂದಕದ ಪಕ್ಕದ ಟಿಬೇಟಿಯನ್ ರ ಪಾಳು ಬಿದ್ದ ಜಮೀನಿನ ಪ್ರದೇಶದಲ್ಲಿ ಅಂದಾಜು ಪ್ರಾಯ 6-7 ವರ್ಷದ ಹುಲಿಯು ಸಾವನ್ನಪ್ಪಿದೆ.

ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್ ಕುಮಾರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ವಲಯ ಅರಣ್ಯಾಧಿಕಾರಿ ಟಿ.ಎಂ.ರವೀಂದ್ರ, ಪಶುವೈದ್ಯಾಧಿಕಾರಿ ಡಾ.ಮುಜೀಬ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜು, ಎನ್ ಟಿ ಸಿಎ ನಿರ್ದೇಶಿತ ರಾಜಕುಮಾರ್, ಚೀಪ್ ವೈಲ್ಡ್ ಲೈಫ್ ವಾರ್ಡನ್ ನಿರ್ದೇಶಿತ ಕೃತಿಕಾ ಭೇಟಿ ನೀಡಿದ್ದು ಮಹಜರು ಸಂದರ್ಭ ಹಾಜರಿದ್ದರು.

ಹುಲಿಯ ಮೃತದೇಹದ ಮರಣೋತ್ತರ ಶವಪರೀಕ್ಷೆಯ ಸಂದರ್ಭ ಎಲ್ಲಾ ಅಂಗಾಂಗಳು ಇದ್ದು ಸ್ವಾಭಾವಿಕವಾಗಿ ಸಾವನ್ನಪ್ಪಿದೆ. ಸಾವಿನ ಬಗ್ಗೆ ನಿಖರವಾದ ಮಾಹಿತಿಗಾಗಿ ದೇಹದ ಕೆಲವು ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಂದ ನಂತರ ನಿಖರವಾದ ಮಾಹಿತಿ ಲಭಿಸಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: