ಮೈಸೂರು

ಸಸಿ ನೆಡುವ ಮೂಲಕ ವಿಶ್ವಪರಿಸರ ದಿನ ಆಚರಿಸಿದ ಪೌರಕಾರ್ಮಿಕರು

ಮೈಸೂರು,ಜೂ.5:- ಇಂದು ವಿಶ್ವ ಪರಿಸರ ದಿನಾಚರಣೆ. ನಗರದ ಸ್ವಚ್ಛತೆಗಾಗಿ ಸದಾ ಶ್ರಮಿಸುವ ಪೌರಕಾರ್ಮಿಕರು ಇಂದು ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದ್ದಾರೆ.

ಪೌರಕಾರ್ಮಿಕರು ಸದಾ ನಗರದ ಸ್ವಚ್ಛತೆಯ ಕಡೆ ಗಮನ ಹರಿಸುತ್ತಿದ್ದು, ಪರಿಸರ ಕುರಿತು ಕಾಳಜಿ ಮೆರೆದಿದ್ದಾರೆ. ನಗರದ ಗೋಕುಲಂ ವಾರ್ಡ್ ನ ಪೌರಕಾರ್ಮಿಕರು ಇಂದು ಬೆಳಿಗ್ಗೆ ಗೋಕುಲಂ ನ ಸ್ಮಶಾನ ರಸ್ತೆಯಲ್ಲಿ ಸೂಪರ್ ವೈಸರ್ ಕಮಲ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನವನ್ನು ಆಚರಿಸಿದರು.

ನಗರದಲ್ಲಿ ಕೋವಿಡ್-19 ಅತಿ ಹೆಚ್ಚು ಪತ್ತೆಯಾದ ಸಂದರ್ಭದಲ್ಲಿಯೂ ನಗರದ ಸ್ವಚ್ಛತೆಯಲ್ಲಿ ಗುರುತಿಸಿಕೊಂಡು  ಕೊರೋನಾ ವಾರಿಯರ್ಸ್ ಗಳೆಂದು ಗುರುತಿಸಿಕೊಂಡಿದ್ದ ಪೌರಕಾರ್ಮಿಕರು ಸಸಿ ನೆಟ್ಟು ಪರಿಸರ ದಿನ ಆಚರಿಸಿದ್ದಕ್ಕೆ ಶ್ಲಾಘನೆ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: