ಪ್ರಮುಖ ಸುದ್ದಿ

24 ಗಂಟೆಗಳಲ್ಲಿ ಸುಮಾರು 10 ಸಾವಿರ ಹೊಸ ಕೊರೋನಾ ಪ್ರಕರಣ :  ಬ್ರೆಜಿಲ್-ಅಮೆರಿಕದ ನಂತರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೊರೋನಾ  

ದೇಶ(ನವದೆಹಲಿ)ಜೂ.5:- ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ ಎರಡೂವರೆ ಲಕ್ಷ ತಲುಪಿದೆ. ಶುಕ್ರವಾರ ಬೆಳಿಗ್ಗೆ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ  ಇದುವರೆಗೆ 2 ಲಕ್ಷ 26 ಸಾವಿರ 770 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.

ಈ ಪೈಕಿ 6348 ಮಂದಿ ಸಾವನ್ನಪ್ಪಿದ್ದರೆ, ಒಂದು ಲಕ್ಷ 9 ಸಾವಿರ ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 9851 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, 273 ಸಾವುಗಳು ಸಂಭವಿಸಿವೆ. ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವೇಗ ವಿಶ್ವದ ಮೂರನೇ ಸ್ಥಾನದಲ್ಲಿದೆ. ಬುಧವಾರ, ಬ್ರೆಜಿಲ್ ನಲ್ಲಿ 27,312 ಹೊಸ ಪ್ರಕರಣಗಳು ಮತ್ತು ಯುಎಸ್ ನಲ್ಲಿ 20,578 ಹೊಸ ಪ್ರಕರಣಗಳು ವರದಿಯಾಗಿದ್ದರೆ, ರಷ್ಯಾದಲ್ಲಿ 8536 ಹೊಸ ಪ್ರಕರಣಗಳು ಕಂಡು ಬಂದಿವೆ.

ಇದರ ಅರ್ಥವೇನೆಂದರೆ, ಒಂದು ದಿನದಲ್ಲಿ ಹೊಸ ಪ್ರಕರಣಗಳ ಹೆಚ್ಚಳದಲ್ಲಿ ಭಾರತ ವಿಶ್ವದ ಮೂರನೇ ಸ್ಥಾನವನ್ನು ತಲುಪಿದೆ. ಭಾರತದಲ್ಲಿ ಇಂದು 9851 ಹೊಸ ಪ್ರಕರಣಗಳಿವೆ. ಯುಎಸ್, ಬ್ರೆಜಿಲ್, ರಷ್ಯಾ, ಬ್ರಿಟನ್, ಸ್ಪೇನ್ ಮತ್ತು ಇಟಲಿಯ ನಂತರ ಕೊರೋನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ 2710, ಗುಜರಾತ್‌ನಲ್ಲಿ 1155, ದೆಹಲಿಯಲ್ಲಿ 650, ಮಧ್ಯಪ್ರದೇಶದಲ್ಲಿ 377, ಪಶ್ಚಿಮ ಬಂಗಾಳದಲ್ಲಿ 355, ಉತ್ತರಪ್ರದೇಶದಲ್ಲಿ 245, ತಮಿಳುನಾಡಿನಲ್ಲಿ 220, ರಾಜಸ್ಥಾನದಲ್ಲಿ 213, ತೆಲಂಗಾಣದಲ್ಲಿ 105, ಆಂಧ್ರಪ್ರದೇಶದಲ್ಲಿ 71, ಕರ್ನಾಟಕ 57, ಪಂಜಾಬ್‌ನಲ್ಲಿ 47, ಜಮ್ಮು ಮತ್ತು ಕಾಶ್ಮೀರದಲ್ಲಿ 35, ಬಿಹಾರದಲ್ಲಿ 29, ಹರಿಯಾಣದಲ್ಲಿ 24, ಕೇರಳದಲ್ಲಿ 14, ಜಾರ್ಖಂಡ್‌ನಲ್ಲಿ 6, ಒಡಿಶಾದಲ್ಲಿ 7, ಅಸ್ಸಾಂನಲ್ಲಿ 4, ಹಿಮಾಚಲ ಪ್ರದೇಶದಲ್ಲಿ 5, ಮೇಘಾಲಯದಲ್ಲಿ 1 ಸಾವುಗಳು ಸಂಭವಿಸಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: