ಮೈಸೂರು

ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ವಾಸುದೇವ ಮಹಾರಾಜ್ ಪ್ರಶಸ್ತಿ ಪ್ರದಾನ

ಮೈಸೂರು,ಜೂ.5:- ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ಶ್ರೀ ವಾಸುದೇವ ಮಹಾರಾಜರ 82 ನೇ ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ “ ಶ್ರೀ ವಾಸುದೇವ ಮಹಾರಾಜ್ ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಪತ್ರಕರ್ತರ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.‌ಶಶಿಶೇಖರ್ ದೀಕ್ಷಿತ್, ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿ . ಶ್ರೀಕಂಠಸ್ವಾಮಿ ದೀಕ್ಷಿತ್, ಚಿತ್ರಕಲೆಯಲ್ಲಿ ಡಾ. ಮೀರಾ ಕುಮಾರ್ , ಸಾಹಿತ್ಯ ಕ್ಷೇತ್ರದಲ್ಲಿ ಡಾ. ಕೆ ಲೀಲಾ ಪ್ರಕಾಶ್ , ಯೋಗ ವಿಭಾಗದಲ್ಲಿ , ಡಾ. ಪಿ ಆರ್ ವಿಶ್ವನಾಥ ಶೆಟ್ಟಿ , ಸಮಾಜ ಸೇವೆಗಾಗಿ ಕೆ ಆರ್ ಯೋಗಾನರಸಿಂಹನ್ , ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ವಿಕ್ರಂ ಅಯ್ಯಂಗಾರ್ ಇವರುಗಳಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕಡಾ. ಕೆ ರಘು ರಾಮ್ ವಾಜಪೇಯಿ , ಉದ್ಯಮಿ ಎಂ ಎಸ್ ದೊರೆಸ್ವಾಮಿ, ಮಡ್ಡಿಕೆರೆ ಗೋಪಾಲ್  ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: