ಪ್ರಮುಖ ಸುದ್ದಿಮೈಸೂರು

2860ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು. ಜೂ.5 :- ಜಿಲ್ಲೆಯ 2860 ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಕೊಡುವ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಕಲಾಮಂದಿರದಲ್ಲಿ ಸಾಂಕೇತಿಕವಾಗಿ 125 ಅಂಗನವಾಡಿ ಕಾರ್ಯಕರ್ತೆಯರಿಗೆ ಇಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿತರಿಸಿದರು.  ಶಾಸಕರಾದ ಎಲ್. ನಾಗೇಂದ್ರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಕಾಳಜಿ ವಹಿಸಿ ಅಂಗನವಾಡಿನ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಆಹಾರ ಕಿಟ್ ವಿತರಣೆಗೆ ಕ್ರಮ ತೆಗೆದುಕೊಂಡಿದ್ದಕ್ಕೆ ನಾನು ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಚಿವರ ಸಹೃದಯತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಗಮನಿಸಬೇಕೆಂದರೆ ಅವರು ಮೃಗಾಲಯ ನಿರ್ವಹಣೆಗೆಂದು ತಮ್ಮ ಆಪ್ತರು, ಕ್ಷೇತ್ರದ ಜನತೆ ಹಾಗೂ ಜನಪ್ರತಿನಿಧಿಗಳಿಂದ 2.85 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ ಭಾಗ್ಯ ಮಾತನಾಡಿ, ಕೊರೋನಾದ ಸಂದರ್ಭದಲ್ಲಿ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಾಹಿರಿ ಕಲೆಹಾಕಿದ್ದಲ್ಲದೆ, ಬಿಸಿಲಿದ್ದರೂ ಸಹ ಆಹಾರ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ತಲುಪಿಸುವ ಕಾರ್ಯ ಅಭಿನಂದನೀಯ. ಹೀಗೆ ನಾವು ಮಾಡಿದ ಸೇವೆಯನ್ನು ಗುರುತಿಸಿ ಗೌರವ ಸೂಚಿಸುತ್ತಿರುವುದನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ವಂದನೆ ಅರ್ಪಿಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಹಸಿರು ಮೈಸೂರು ಸಂಘಟನೆ ಅಧ್ಯಕ್ಷ ರಾಜೀವ್, ಮೈಸೂರು ಬಿಜೆಪಿ ಅಧ್ಯಕ್ಷ ಮಹೇಂದ್ರ ಇತರರು ಇದ್ದರು.

ಗಿಡ ನೆಟ್ಟು ಹಸಿರೀಕರಣಕ್ಕೆ ಚಾಲನೆ

ಕಾರ್ಯಕ್ರಮದ ಬಳಿಕ ಕಲಾಮಂದಿರ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಹಸಿರೀಕರಣಕ್ಕೆ ಚಾಲನೆ ನೀಡಿದರು. (ಜಿ.ಕೆ.ಎಸ್.ಎಚ್)

Leave a Reply

comments

Related Articles

error: