ಮೈಸೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಡಾವಣೆಯ ಹಲವೆಡೆ ಗಿಡ ನೆಟ್ಟ ಸಮಾನ ಮನಸ್ಕರ ವೇದಿಕೆ

ಮೈಸೂರು,ಜೂ.5:- ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಡಾವಣೆಯ ಹಲವೆಡೆ ಗಿಡ ನೆಡಲಾಯಿತು.

ಮೈಸೂರಿನ ಪೊಲೀಸ್ ಬಡಾವಣೆಯಲ್ಲಿ ವೇದಿಕೆ ಸದಸ್ಯರು ಹಲಸು, ನೇರಳೆ, ಆಲ, ಅರಳಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು. ಮಕ್ಕಳು ಕೂಡ ಗಿಡ ನೆಡಲು ಸಾಥ್ ನೀಡಿದ್ದು  ವಿಶೇಷವಾಗಿತ್ತು‌.

ಇದೇ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಪದಾಧಿಕಾರಿಗಳಾದ ಸಿದ್ದರಾಜೇಗೌಡ, ಮೋಹನರಾವ್, ಅಶೋಕ್, ಜಯಪಾಲ, ಮೋಹನ್ ಕುಮಾರ್, ಬಾಬುರಾವ್ ಹಾಗೂ ಬಡಾವಣೆಯ ನಿವಾಸಿಗಳು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: