ಪ್ರಮುಖ ಸುದ್ದಿಮೈಸೂರು

ಕಲಾವಿದರು ಹೆದರುವ ಅಗತ್ಯವಿಲ್ಲ ನಮ್ಮ ಸರ್ಕಾರ ನಿಮ್ಮೊಂದಿಗಿದೆ : ಸಚಿವ ಎಸ್.ಟಿ ಸೋಮಶೇಖರ್ ಅಭಯ

ಪೋಷಕ ನಟರಿಗೆ ಸಹಾಯ ಹಸ್ತ

ಮೈಸೂರು,ಜೂ.5:- ಕೊರೋನದಿಂದ ಕಷ್ಟದ ಪರಿಸ್ತಿತಿಯಲ್ಲಿದ್ದ ಚಲನಚಿತ್ರ ಪೋಷಕ ನಟರಿಗೆ ಜನಮನ ವೇದಿಕೆಯ ಅಧ್ಯಕ್ಷರಾದ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್  ಅವರು ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮವನ್ನು ಗವರ್ನಮೆಂಟ್ ಗೆಸ್ಟ್ ಹೌಸ್ ಸಭಾಂಗಣದಲ್ಲಿಂದು  ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ನಡಸಿ ಕೊಟ್ಟರು.  ಕಲಾವಿದರಿಗೆ 75000ಸಾವಿರ ರೂಗಳನ್ನು ನೀಡಿದರು.  ಸಹಕಾರಿ ಧುರೀಣ ರಾಜೀವ್   ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್  ಅವರು 75000 ರೂ.ಗಳನ್ನು ಸಹಕಾರಿ ಧುರೀಣ ರಾಜೀವ್ ಅವರು 25000, ಉದ್ಯಮಿ ಅಮರ್ ನಾಥ್ ರಾಜೇ ಅರಸ್ ಅವರು 25000 ರೂಗಳನ್ನು ನೀಡಿದರು.

ಒಬ್ಬೊಬ್ಬರಿಗೆ 8 ಸಾವಿರ ರೂಗಳಂತೆ 30 ಕಲಾವಿದರಿಗೆ ನೀಡಲಾಯಿತು.  ಇದರ ಜೊತೆ ಗೆ ಹಣ್ಣು ಹಾಗೂ  ಗಿಡಗಳನ್ನು ನೀಡಲಾಯಿತು.  ಚಲನಚಿತ್ರ ಪೋಷಕ  ನಟರಾದ ಡಿಂಗ್ರಿ ನಾಗರಾಜ್,   ರೇಖಾ ದಾಸ್ , ವೈದ್ಯನಾಥ್ ಬಿರಾದಾರ್ , ಶಂಕರ್ ಅಶ್ವಥ್ , ಮೈಸೂರು ರಾಮಾನಂದ ಸೇರಿದಂತೆ ಇನ್ನುಳಿದ ಕಲಾವಿದರು ಭಾಗವಹಿಸಿದ್ದರು.

ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್   ಮಾತನಾಡಿ  ಕಲಾವಿದರು ಹೆದರುವ ಅಗತ್ಯವಿಲ್ಲ .  ನಮ್ಮ ಸರ್ಕಾರ ನಿಮ್ಮೊಂದಿಗಿದೆ.  ಮುಂದಿನ ದಿನಗಳಲ್ಲಿ ಇನ್ನು ಹಲವಾರು ಯೋಜನೆಗಳನ್ನು ಸರ್ಕಾರ ನಿಮಗೋಸ್ಕರ ತರಲಿದೆ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಶ್ರೀವತ್ಸ, ನಗರ ಗ್ರಾಮಾಂತರ ಅಧ್ಯಕ್ಷರಾದ ಮಹೇಂದ್ರ, ಮೈಮುಲ್ ನಿರ್ದೇಶಕ ಅಶೋಕ್ , ಮುಖಂಡರಾದ ಸಿ ಸಂದೀಪ್, ಸೋಮೇಶ್, ಧರ್ಮೇಂದ್ರ, ಅದ್ವೈತ್, ಶಿವು, ರಾಮಚಂದ್ರ, ಪ್ರಭಾಕರ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: