ಮೈಸೂರು

ಡಿ.ಟಿ.ಎಸ್ ಫೌಂಡೇಶನ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನವನ್ನು ಸಸಿನೆಡುವ ಮೂಲಕ ಆಚರಣೆ

ಮೈಸೂರು,ಜೂ.5:-  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟುಹಬ್ಬದ ಅಂಗವಾಗಿ ಡಿ.ಟಿ.ಎಸ್ ಫೌಂಡೇಶನ್ ವತಿಯಿಂದ ರಾಮಾನುಜ ರಸ್ತೆಯಲ್ಲಿರುವ ಶ್ರೀನಿವಾಸ ಅಗ್ರಹಾರ ಉದ್ಯಾನವನದಲ್ಲಿಂದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂಧರ್ಭದಲ್ಲಿ ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್   ಮಾತನಾಡಿ  ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಶ್ವದಲ್ಲೇ ಮನ್ನಣೆ ಪಡೆದು ಜನಪ್ರಿಯವಾಗಿದೆ ಎಂದರೆ ಮೈಸೂರು ಸಂಸ್ಥಾನದ ನಿರ್ಮಾತೃ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಿಂದ ಮಾತ್ರ .  ಕೆರೆಕಟ್ಟೆ, ಕಲ್ಯಾಣಿ ಗೋಪುರ ಅಗ್ರಹಾರವಾಗಿದ್ದ ಮೈಸೂರು ಸಂಸ್ಥಾನವನ್ನು ವಿಶ್ವಮಟ್ಟದಲ್ಲಿ ಶಿಕ್ಷಣ ಕಾಶಿಯಾಗಿ ಗಮನ ಸೆಳೆಯಲು ಮೈಸೂರು ವಿಶ್ವಾವಿದ್ಯಾನಿಲಯ, ಕೃಷ್ಣರಾಜ ಸಾಗರ ಜಲಾಶಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷ್ಣರಾಜ ಆಸ್ಪತ್ರೆ, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಸ್ಯಾಂಡಲ್ ಸೋಪ್, ಶಿಂಷಾ ಜಲವಿದ್ಯುತ್ ಸ್ಥಾವರ, ಚೇಂಬರ್ ಆಫ್ ಕಾಮರ್ಸ್ ವರೆಗೂ ಅವರ ಕೊಡುಗೆ ಅಪಾರ. ಅದರ ಜೊತೆಯಲ್ಲಿ ಯಂತ್ರ ಋಷಿಯಾಗಿ ಚಿಂತನೆ ಮತ್ತು ಯೋಜನೆ ರೂಪಿಸಿ ಶ್ರಮಿಸಿದವರು ಅಂದು ದಿವಾನ್ ರಾಗಿದ್ದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ನವರು. ಇವತ್ತಿಗೂ ಹಳೇ ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಇವರ ಕಾಲದ ಕೊಡೆಗೆಯನ್ನು ಸ್ಮರಿಸಿ ರಾಜರ್ಷಿ ನಾಲ್ವಡಿ ಮತ್ತು   ಸರ್.ಎಂವಿ ಭಾವಚಿತ್ರಗಳಿವೆ, ಸಹಸ್ರಾರು ಸಂಖ್ಯೆಯಲ್ಲಿ ಗ್ರಾಮ ಮಟ್ಟದಲ್ಲಿ ಅಭಿಮಾನಿಗಳ ಬಳಗಗಳು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಕೃಷ್ಣರಾಜ ಸಾಗರ ಜಲಾಶಯದ ದಕ್ಷಿಣದ್ವಾರದ ಮುಂಭಾಗ ಸ್ಥಾಪಿಸುತ್ತಿರುವ ನಾಲ್ವಡಿ ಮತ್ತು ಸರ್.ಎಂವಿ ಪ್ರತಿಮೆಯನ್ನು ಬೇಗ ಸ್ಥಾಪನೆ ಮಾಡಬೇಕು. ಇದರಿಂದ ಇತಿಹಾಸವೂ ಮುಂದಿನ ಪೀಳಿಗೆಗೆ ಪರಿಚಯವಾಗುತ್ತದೆ.  ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ.  ಕರ್ನಾಟಕ ಸರ್ಕಾರ ಕೈಗೊಂಡಿರುವ ನಾಲ್ವಡಿ ಸರ್.ಎಂ ಪ್ರತಿಮೆ ಸ್ಥಾಪನೆ ಯೋಜನೆಗೆ ಕೇವಲ ಇಂಜಿನಿಯರರ್ಸ್ ಮಾತ್ರವಲ್ಲದೇ ಪ್ರತಿಯೊಬ್ಬ ಕನ್ನಡಿಗರೂ ಸಹಕಾರ ನೀಡಲಿದ್ದಾರೆ ಎಂದರು

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ,  ಸಂತೋಷ್ ಶಂಭು, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್,ರವಿ ತೇಜ ,ಮನು (ಅಪ್ಪಿ)  ಶ್ರೀಕಾಂತ್ ಕಶ್ಯಪ್,  ಶ್ರೀನಿವಾಸ್ ರಾಕೇಶ್, ಶಿವಕುಮರ್, ಮನು ಶೈವ್, ಚಕ್ರಪಾಣಿ, ಸುಚೀಂದ್ರ, ಗಣೇಶ್ ಪ್ರಸಾದ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: