ಮೈಸೂರು

ವಿಶ್ವನಂದನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು, ಜೂ.5:- ನಗರದ ಕುವೆಂಪುನಗರದ ವಿಶ್ವನಂದನ ಉದ್ಯಾನವನದಲ್ಲಿಂದು ವಿಶ್ವ ಪರಿಸರ ದಿನಾಚರಣೆಯನ್ನು ಹೆಚ್.ವಿ.ರಾಜೀವ್ ಸ್ನೇಹ ಬಳಗ ಹಾಗೂ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ಜಂಟಿಯಾಗಿ ‘ಜೀವ ವೈವಿಧ್ಯ’ ಎಂಬ ಘೋಷ ವಾಕ್ಯದೊಂದಿಗೆ ಪರಿಸರ ದಿನಾಚರಣೆಯನ್ನು ಅರ್ಧಪೂರ್ಣವಾಗಿ ಆಚರಿಸಲಾಯಿತು.

ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಭಿಯಂತರರಾದ ಹೆಚ್.ಎನ್.ಶ್ರೀನಿವಾಸ ಮೂರ್ತಿಯವರು ಮಾತನಾಡುತ್ತಾ, ಇಂದು ನಾವು ವಿಶ್ವ ಪರಿಸರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಸಸಿಗಳನ್ನು ನೆಡುವುದು ಮುಖ್ಯವಲ್ಲ, ಸಸಿಗಳನ್ನು ಪೋಷಿಸಿ, ರಕ್ಷಿಸಿ ಹೆಮ್ಮರವನ್ನಾಗಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ತಿಳಿಸಿದ ಅವರು, ಪ್ರಾಣಿ, ಪಕ್ಷಿಗಳು ಹಾಗೂ ಮನುಷ್ಯ ವರ್ಗಕ್ಕೆ ಪ್ರಕೃತಿಯೇ ಮೂಲ ಆಧಾರ. ಆದ್ದರಿಂದ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾಗರೂಕರಾಗಬೇಕೆಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಆದಿ ಕರ್ನಾಟಕ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ.ಮುರುಳಿಯವರು ಮಾತನಾಡಿ, ಹಸಿರೇ ಉಸಿರು, ನಾವು ಮುಂದಿನ ಪೀಳಿಗೆಗೆ ಏನಾದರೂ ಬಿಟ್ಟು ಹೋಗುವುದಿದ್ದರೆ ಅದು ಹಣ, ಅಂತಸ್ತು ಹಾಗೂ ಆಸ್ತಿಯಲ್ಲ. ಅದೇನಿದ್ದರೂ ಪರಿಶುದ್ಧವಾದ ಪರಿಸರ ಮಾತ್ರ, ಪ್ರಕೃತಿಯನ್ನು ಬಿಟ್ಟು ಹೋಗಬೇಕು. ನಾವೆಲ್ಲರೂ ಪರಿಸರವನ್ನು ಗೌರವಿಸಿ, ಪ್ರೀತಿಸುವುದರ ಮೂಲಕ ಸಂರಕ್ಷಿಸಬೇಕಿದೆ. ಪ್ರಕೃತಿಯು ಮನುಷ್ಯನ ಆಸೆಗಳನ್ನು ಪೂರೈಸುತ್ತದೆಯೇ ಹೊರತು, ದುರಾಸೆಗಳನ್ನಲ್ಲ ಎಂದು ಅವರು ತಿಳಿಸಿ, ಮುಂದಿನ ಯುವ ಜನಾಂಗ ಪರಿಸರದ ಬಗ್ಗೆ ಕಾಳಜಿ ವಹಿಸಿ, ಶುದ್ಧ ಪರಿಸರವನ್ನು ಹೆಚ್ಚಾಗಿ ಸಂರಕ್ಷಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್.ವಿ.ರಾಜೀವ್ ಸ್ನೇಹ ಬಳಗದ ಸಂಚಾಲಕ ಆರ್.ಕುಮಾರ್, ಆಟೋ ಕುಮಾರ್, ಎ.ಆರ್.ಭಾಸ್ಕರ್, ಕುಮಾರಸ್ವಾಮಿ, ಸ್ನೇಹಜೀವಿ ಕೌಶಿಕ್, ಸಮರ್ಪಣಾ ಟ್ರಸ್ಟ್ ನ ಗೌರವ ಖಜಾಂಚಿ ಹಾಗೂ ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಭಾಗ್ಯ, ಗೀತಾ, ಜ್ಯೋತಿ, ಕವಿತಾ, ಆಕಾಶ್, ಚಂಪಾ, ಹಾಗೂ ಸ್ಥಳೀಯ ಮೂಲ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: