ಮೈಸೂರು

ಅಧಿಕಾರ ದುರ್ಬಳಕೆ ಮತ್ತು ಜನರಿಗೆ ವಂಚನೆ ಆರೋಪ : ಪಾಲಿಕೆಯ ಐವರು ನೌಕರರಿಗೆ ನೊಟೀಸ್ ನೀಡಿದ ಆಯುಕ್ತರು

ಮೈಸೂರು,ಜೂ.6:- ಲಾಕ್ ಡೌನ್ ಸಂದರ್ಭದಲ್ಲೂ ಅಧಿಕಾರ ದುರ್ಬಳಕೆ ಮತ್ತು ಜನರಿಗೆ ವಂಚನೆ ಆರೋಪದಲ್ಲಿ ಮೈಸೂರು ನಗರಪಾಲಿಕೆಯ ಐವರು ನೌಕರರಿಗೆ ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ನೊಟೀಸ್ ನೀಡಿದ್ದಾರೆ.

ನಗರಪಾಲಿಕೆಯ ಕಂದಾಯ ವಿಭಾಗದ ಎನ್. ಮಂಜುನಾಥ್, ಅಶ್ರಯ ವಿಭಾಗದ ಮಂಜುನಾಥ್, ವಲಯ ಕಚೇರಿ 8ರ ಕಂದಾಯ ಪರಿಶೀಲಕರಾದ ಲೋಕೇಶ್ ಮತ್ತು ಸಿದ್ದರಾಜು ಹಾಗೂ ನೌಕರ ಸಿ. ರಾಜುಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ. ಏಪ್ರಿಲ್ 14 ರಂದು ಲಾಕ್ ಡೌನ್ ಸಂದರ್ಭ ಹಿನಕಲ್ ಬಡಾವಣೆಯ 25ಕ್ಕೂ ಹೆಚ್ಚು ಮಂದಿಗೆ ಫುಡ್ ಕಿಟ್ ಹಂಚದೆ ವಂಚನೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ನಗರಪಾಲಿಕೆ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿ ಬಡವರನ್ನು ಒಂದೆಡೆ ಸೇರುವಂತೆ ನೌಕರರು ಸೂಚಿಸಿದ್ದರು. ಬಳಿಕ ಫುಡ್ ಕಿಟ್ ಹಂಚದೆ ಎಸ್ಕೇಪ್ ಆಗಿದ್ದರು. ಬಳಿಕ ಸಾಮಾಜಿಕ ಕಾರ್ಯ ಕರ್ತ ಗಂಗರಾಜು ಮತ್ತು ಸ್ನೇಹಿತರಿಂದ ಬಡವರಿಗೆ ಫುಡ್ ಕಿಟ್ ಹಂಚಿಕೆ ಮಾಡಿದ್ದರು. ಐವರು ನಗರಪಾಲಿಕೆ ನೌಕರರ ವಿರುದ್ಧ ಕೋವಿಡ್ 19 ವಿಶೇಷಾಧಿಕಾರಿ ಹರ್ಷ ಗುಪ್ತಾಗೆ ಗಂಗರಾಜು ದೂರು ನೀಡಿದ್ದರು. ಗಂಗರಾಜು ದೂರಿನನ್ವಯ ಕ್ರಮಕ್ಕೆ ನಗರಪಾಲಿಕೆ ಆಯುಕ್ತರಿಗೆ ಹರ್ಷಗುಪ್ತಾ ಸೂಚನೆ ನೀಡಿದ್ದು, ಐವರಿಗೂ ನಗರಪಾಲಿಕೆ ಆಯುಕ್ತರು ನೋಟೀಸ್ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: