ಕ್ರೀಡೆದೇಶ

ಲಾಕ್​ಡೌನ್​ ವೇಳೆ ಕೋಟ್ಯಾಂತರ ರೂ. ಸಂಪಾದಿಸಿದ ವಿರಾಟ್ ಕೊಹ್ಲಿ

ಮುಂಬೈ,ಜೂ.6-ಲಾಕ್​ಡೌನ್​ ನಿಂದಾಗಿ ಯಾವುದೇ ಕ್ರಿಕೆಟ್ ಪಂದ್ಯಗಳಿಲ್ಲ. ಕ್ರಿಕೆಟಿಗರು ಫ್ಯಾಮಿಲಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆಯೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೋಟ್ಯಾಂತರ ರೂ. ಸಂಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಂ ಮೂಲಕ ವಿರಾಟ್ ಕೊಹ್ಲಿ ಭರ್ಜರಿ ಸಂಪಾದನೆ ಮಾಡಿದ್ದಾರೆ. ಕೊಹ್ಲಿ ಪ್ರಾಯೋಜಿತ ಪೋಸ್ಟ್​​ಗಳ ಮೂಲಕ 379,294 ಪೌಂಡ್​​ (3.6 ಕೋಟಿ) ಗಳಿಸಿದ್ದಾರೆ. ಲಾಕ್​​​ಡೌನ್​​ ಕೊಹ್ಲಿ ಮೂರು ಪೋಸ್ಟ್​ ಶೇರ್​​​ ಮಾಡಿದ್ದಾರೆ. ಪ್ರತಿ ಫೋಟೋಗೆ 126,431 ಪೌಂಡ್​​ ಪಡೆದುಕೊಂಡಿದ್ದಾರೆ.

ಲಾಕ್​ಡೌನ್​ ವೇಳೆ ಇನ್​​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಅದಾಯಗಳಿಸಿರುವ ಟಾಪ್​ 10 ಸೆಲೆಬ್ರಿಟಿಗಳ ಪಟ್ಟಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಕೊಹ್ಲಿ ಕೂಡ ಇದ್ದಾರೆ. ಅಲ್ಲದೆ, ಹೆಚ್ಚು ಆದಾಯ ಗಳಿಸುತ್ತಿರುವ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಚ್​ 12 ರಿಂದ ಮೇ 14ರ ವರೆಗಿನ ಲಾಕ್​​ಡೌನ್​​ ಅವಧಿಯಲ್ಲಿ ಮ್ಯಾನೆಜ್​ಮೆಂಟ್​​ ಕನ್ಸಲ್ಟಿಂಗ್​ ಕಂಪನಿ ಅಂಕಿ ಅಂಶಗಳ ಆಧಾರದಲ್ಲಿ ಇನ್​​​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಸೆಲೆಬ್ರಿಟಿಗಳನ್ನು ಪಟ್ಟಿ ಮಾಡಿತ್ತು.

ಫುಟ್ ಬಾಲ್ ತಾರೆ ಆಟಗಾರ ಕ್ರಿಶ್ಚಿಯಾನೋ‌ ರೊನಾಲ್ಡೋ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಲಿಯೋನಲ್ ಮೆಸ್ಸಿ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ನೇಯ್ಮರ್ ಇದ್ದಾರೆ. ಕೊಹ್ಲಿಗೆ ಆರನೇ ಸ್ಥಾನ.

ಪೋರ್ಚುಗೀಸ್​​ ಪುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಲಿಯೋನಲ್ ಮೆಸ್ಸಿ, ಮೂರನೇ ಸ್ಥಾನದಲ್ಲಿ ನೇಯ್ಮರ್, ಆರನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪೋಸ್ಟರ್​ಗಳಿಗೆ 1.8 ಮಿಲಿಯನ್​​ ಪೌಂಡ್​​ (17.9)ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: